Site icon Suddi Belthangady

ಗಂಡಿಬಾಗಿಲು ಚರ್ಚಿನಲ್ಲಿ ವಿಜೃಂಭಣೆಯ ಸಿ ಎಂ ಎಲ್ ವಜ್ರ ಮಹೋತ್ಸವ


ನೆರಿಯ : ಗಂಡಿ ಬಾಗಿಲು ಇಲ್ಲಿನ ಸಂತ ತೋಮಸರ ದೇವಾಲಯದಲ್ಲಿ ನಡೆದ ಚೆರು ಪುಷ್ಪ ಮಿಷನ್ ಲೀಗ್ ನ ಧರ್ಮ ಕೇಂದ್ರೀಯ ಮಟ್ಟದ ವಜ್ರ ಮಹೋತ್ಸವನ್ನು ವಿಜೃಂಭಣೆ ಯಿಂದ ಆಚರಿ ಸಲಾಯಿತು. ಧಾರ್ಮಿಕ ವಿಧಿಗಳನ್ನು ವಂದನಿಯ ಫಾದರ್ ಸಿರಿಲ್, ಫಾಧರ್ ಜಿನ್ಸ್, ಫಾಧರ್ ಅರುಣ್ ಜೋಸೆಫ್ ಚೀರನ್, ಚರ್ಚಿನ ಧರ್ಮ ಗುರುಗಳಾದ ವಂದನಿಯ ಫಾಧರ್ ಶಾಜಿ ಮಾತ್ಯು ಇವರನ್ನು ಒಳಗೊಂಡ ಪಂಚ ಯಾಜಕರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ವೈಭವ ನಾಮಾ೦ಕಿತ ಸಾಂಸ್ಕೃತಿಕ ಉತ್ಸವವು ಆಕರ್ಷಕ ಮಿಷನ್ ರಾಲಿ ಯೊಂದಿಗೆ ಆರಂಭಿಸಲಾಯಿತು. ಈ ಕಾರ್ಯಕ್ರಮ ವನ್ನು ಬೆಳ್ತಂಗಡಿ ಧರ್ಮ ಪ್ರಾಂತ್ಯ ದ ದರ್ಮಾ ಧ್ಯಕ್ಷರಾದ ಪರಮ ಪೂಜ್ಯ ಅತಿವಂದನಿಯ ಲಾರೆನ್ಸ್ ಮುಕ್ಕುಯಿ ಉದ್ಘಾಟಿಸಿ ಮಕ್ಕಳು ಇಳಿ ವಯಸ್ಸಿನಲ್ಲೇ ವಿವಿಧ ಸಂಘ ಸಂಸ್ಥೆ ಗಳ ಸದಸ್ಯತ್ವದ ಮೂಲಕ ಬೆಳೆದಾಗ ಮಕ್ಕಳಲ್ಲಿ ಸೇವಾ ಮನೋಭಾವ , ಆಧ್ಯಾತ್ಮ ಭಾವ ವ್ಯಕ್ತಿತ್ವ ವಿಕಾಸ ಸೃಜನ ಶೀಲತೆ ಬೆಳಸಿ ಕೊಳ್ಳಲು ಸಹಕಾರಿಯಾಗಲಿದೆ ಎಂದು ತಮ್ಮಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾದ ಒಸ್ಟಿನ್ ಪನಚಿಕ್ಕಲ್ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಸಿಯೋನ್ ಆಶ್ರಮದ ಮಾನೇಜಿಂಗ್ ಟ್ರಸ್ಟಿ ಯು ಸಿ ಪೌಲೋಸ್, ರಾಜ್ಯ ಅಧ್ಯಕ್ಷ ರಾದ ನಿವ್ರತ್ತ ಎಸ್ ಪಿ ಜಿ ಕಂಮಾಂಡೆರ್ ಶ್ರೀ ಜೋನಿ, ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಬಿಟ್ಟಿ ನೆಡುನಿಲಂ, ಟ್ರಸ್ಟಿಗಳಾದ ಶ್ರೀ ಸೇಬಾಸ್ಟಿನ್ ಎಂ ಜೆ ಬೇಬಿ ಸಿ ಎ ಶ್ರೀ ಆಗಸ್ಟಿನ್
ಮಾತ್ರ ಸಂಘದ ಶ್ರೀ ಮತಿ ಶೈಬಿ ಮನೋಜ್ ಮಾದವತ್ ಎಸ್ ಎಂ ವೈ ಎಂ ಅಧ್ಯಕ್ಷ ರಾದ ಶ್ರೀ ಮಿಥುನ್ ರಾಜ್ಯ ಸಂಯೋಜಕರಾದ ಶ್ರೀ ಶಿಜು ಪನಚಿಕ್ಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಸುಮಾರು 66ಸಾವಿರ ರೂಪಾಯಿ ಮೌಲ್ಯದ ಶಿಂಟೋ ವರ್ಗಿಸ್ ಪ್ರಾಯೋಜಕ ತ್ವದ ವಿದ್ಯಾರ್ಥಿ – ವಿದ್ಯಾ ಸ್ಕೊಲರ್ ಶಿಪ್ ನ್ನು ವಿತರಿಸಲಾಯಿತು.

ಗಂಡಿ ಬಾಗಿಲು ಸಂಡೇ ಸ್ಕೂಲ್ ಮುಖ್ಯ್ಯೊ ಪಾಧ್ಯಾಯ ಹಾಗೂ ಕಾರ್ಯಕ್ರಮ ನಿರ್ವಾಹಣ ಸಮಿತಿಯ ಅಧ್ಯಕ್ಷ ರಾದ ಶ್ರೀ ಶಿಜು ವರ್ಗಿಸ್ ಚೇಟ್ಟುತಡತಿಲ್ ಸ್ವಾಗತಿಸಿದರು . ಬೇಬಿ ವಳ್ಳಿ ಪರಂಭಿಲ್ ಕೋಶಧಿಕಾರಿಯಾಗಿಯು,  ಜಾಸ್ಮಿನ್ ರೆಜಿ ನಂದಳತ್ ಸಂಯೋಜಕಿ ಯಾಗಿಯೂ ಡೇವಿಸ್ ಕುಟ್ಟಪ್ಪಶೇರಿ ನಿವೃತ್ತ ಶಿಕ್ಷಕರ ಸ್ವಾಗತ ಸಮಿತಿಯ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದರು.ಸಿಸ್ಟರ್ ಡಿವಿನಾ ಸಿಸ್ಟರ್ ಜಿಯಾ ಸಿಸ್ಟರ್ ಟ್ರೀಸ ಶ್ರೀ ಉಜ್ವಲ್, ಶ್ರಮತಿ ಮಿನಿ ಜೋಯ್,ಸುನಿತಾ ಬೇಬಿ ಬೋಬಿ ಅಕಂಪಡಿ, ರೋಶನಿ ಅನಿಲ್ ಸಹಕರಿಸಿದರು ಶ್ರೀಮತಿ ಸುಜಿ ಡೊಲ್ಫಿ ಕಾರ್ಯಕ್ರಮ ನಿರೂಪಿಸಿದರು

Exit mobile version