ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿಯ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಕ್ರೀಡಾ ಕೂಟ ಕಾರ್ಯಕ್ರಮ

0

ಬಂದಾರು: ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿಯ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಕ್ರೀಡಾ ಕೂಟ ಕಾರ್ಯಕ್ರಮ ನ.20 ರಂದು  ಏರ್ಪಡಿಸಲಾಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಹಿರಿಯ ಶಿಕ್ಷಕ ಕೊರಗಪ್ಪ ಟಿ ಉದ್ಘಾಟಿಸಿದರು ಮತ್ತು ಶಾಲೆಯ ಬಗ್ಗೆ ಮತ್ತು ಸಂಘಟನೆಯ ಮಹತ್ವದ ಬಗ್ಗೆ ತಿಳಿ ಹೇಳಿದರು.

ಹಳೆ ವಿದ್ಯಾರ್ಥಿ ಸಂಘದ ಲೋಗೋವನ್ನು ಹಿರಿಯರಾದ ದೇಜಪ್ಪ ಗೌಡ ಕೊಂಕನೊಟ್ಟು ಇವರು ಅನಾವರಣ ಗೊಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೇಶವ ಅಂಗಡಿ ಮಜಲು ಇವರು ವಹಿಸಿದ್ದರು.ಗೌರವ ಉಪಸ್ಥಿತಿಯಾಗಿ ಶಾಲಾ ಮುಖ್ಯೋಪಾಧ್ಯಯರಾದ ಬಾಲಕೃಷ್ಣ ಮತು ಹಿರಿಯರಾದ ದೆಜಪ್ಪ ಗೌಡ ಕೊಂಕನೊಟ್ಟು, ಹೊನ್ನಪ್ಪ ಗೌಡ ಸೋಣಕುಮೇರು, ಮುತ್ತಪ್ಪ ಗೌಡ ಕಾಡಂಡ, ಸೀತಮ್ಮ ಕಾಡಂಡ, ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷರಾದ ಮೋಹನ್ ಗೌಡ ಕೋಡಿಯಲು ಹಾಗೂ ಬೆಳ್ಳಿ ಹಬ್ಬದ ಕಾರ್ಯಾಧ್ಯಕ್ಷರಾದ ಮಹಾಬಲ ಗೌಡ,ಗ್ರಾಮ ಪಂಚಾಯಿತಿ ಬಂದಾರು ಸದಸ್ಯರುಗಳಾದ ಅನಿತಾ ಕೆ ಮತ್ತು ಭಾರತಿ ಕೋಡಿಯಲು ಉಪಸ್ಥಿತಿಯಲ್ಲಿ ನಡೆಯಿತು.

ಸುಮಾರು 400 ವಿದ್ಯಾರ್ಥಿಗಳು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here