Site icon Suddi Belthangady

ಗಂಡಿಬಾಗಿಲಿನಲ್ಲಿ ಪ್ರಾರ್ಥನಾ ಗುಡಿಯ ಮರುನಿರ್ಮಾಣಕ್ಕೆ ಶಿಲಾನ್ಯಾಸ


ನೆರಿಯ : ಗಂಡಿಬಾಗಿಲು ಇಲ್ಲಿನ ಪ್ರತಿಷ್ಟಿತ ಸಂತ ತೋಮಸರ ದೇವಾಲಯ ವ್ಯಾಪ್ತಿಗೆ ಒಳಪಟ್ಟ ಸೆಂಟ್ ಮೇರಿಸ್ ಪ್ರಾರ್ಥನ ಗುಡಿಯ ಮರು ನಿರ್ಮಾಣಕ್ಕೆ ತೋಟತ್ತಾಡಿಯ ಫೋರೋನಾ ವಿಕಾರ್ ವಂದನಿಯ ಫಾದರ್ ಜೋಸ್ ಪೂವತ್ತಿಂಕಲ್ ಇವರ ನೇತೃ ದಲ್ಲಿ ವಂದನಿಯ ಧರ್ಮಗುರುಗಳಾದ ಫಾಧರ್ ಶಾಜಿ ಮಾತ್ಯು ಇವರ ಉಪಸ್ಥಿತಿಯಲ್ಲಿ ಪ್ರಾರ್ಥನೆ ಮತ್ತು ಪೂಜಾ ವಿಧಿಗಳನ್ನು ನೆರವೇರಿಸಿ ಶಿಲಾನ್ಯಾಸ ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಪ್ರಾರ್ಥನಾ ಮಂದಿರಗಳು ಜನರಲ್ಲಿ ಭಕ್ತಿ ಮತ್ತು ನಂಬಿಕೆ ಮತ್ತು ಧರ್ಮ ವಿಚಾರ ವನ್ನು ಜಾಗ್ರತ ಗೊಳಿಸುವ ಶ್ರದ್ದಾ ಕೇಂದ್ರ ಗಳಾ ಗಬೇಕೆಂದು ಕರೆನೀಡಿದರು.

ಇದರ ಮರು ನಿರ್ಮಾಣ ವನ್ನು ನಿರ್ವಹಿಸುತ್ತಿರುವ  ಅರುಣ್ ಸೋಮನ್ ಎರ್ನಾಕುಳಂ, ಆರ್ಥಿಕ ಸಹಾಯವನ್ನು  ಒದಗಿಸುತ್ತಿರುವ  ಬಿನು ಪುದಿಯೇಡತ್, ಚರ್ಚಿನ ಟ್ರಸ್ಟಿ ಗಳಾದ  ಸೇಬಾಸ್ಟಿನ್ ಎಂ ಜೆ,  ಬೇಬಿ ಸಿ ಎ, ಸಿಯೋನ್ ಆಶ್ರಮ ದ ಡಾಕ್ಟರ್ ಯು ಸಿ ಪೌಲೋಸ್, ಸೇಬಾಸ್ಟಿನ್ ವಿ ಟಿ, ಗ್ರಾಮ ಪಂಚಾಯತ್ ಮೆಂಬರ್  ತೋಮಸ್ ವಿ ಡಿ ಆಗಸ್ಟಿನ್ ಪಾಲನ, ವಾರ್ಡ್ ನ ಪಾಲನಾ ಸಮಿತಿಯ  ರೆಜಿ ಎನ್ ಜೆ,ಸಮಿತಿಯ ಇತರೆ ಸದಸ್ಯರು, ಊರ ಹಿರಿಯರು ಚರ್ಚಿನ ಮತ್ತು ಸೆಂಟ್ ಮೇರಿಸ್ ವಾರ್ಡಿನ ಸದಸ್ಯರು ಇದರಲ್ಲಿ ಭಾಗವಹಿಸಿದರು.

Exit mobile version