Site icon Suddi Belthangady

ಬೆಳ್ತಂಗಡಿ ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಜನಾ ತಂಡದ ಉದ್ಘಾಟನೆ


ಬೆಳ್ತಂಗಡಿ : ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಶ್ರೀ ಮಂಜುನಾಥ ಭಜನಾ ತಂಡದ ಉದ್ಘಾಟನೆಯು ನ.21 ರಂದು  ನಡೆಯಿತು.

ವಿಧಾನ ಪರಿಷತ್ತು ಶಾಸಕ ಪ್ರತಾಪಸಿಂಹ ನಾಯಕ್ ಉದ್ಘಾಟಿಸಿ ಮಾತನಾಡಿ ಭಜನೆಯಿಂದ ದೇಹಕ್ಕೆ ಆರೋಗ್ಯ ,ಭಜನೆಯಿಂದ ಏಕಾಗ್ರತೆ , ಭಜನೆಯ ಸಾಹಿತ್ಯ ಗಮನಿಸಿದರೆ ಮನಸ್ಸಿಗೆ ಮುದ ನೀಡುವ ಆನಂದ, ಭಜನೆಯಿಂದ ಒಳ್ಳೆಯ ಗುಣ ,ಶಿಸ್ತು ಮೂಡುತ್ತದೆ. ನಮ್ಮ ಮನಸ್ಸನ್ನು ಏಕಾಗ್ರತೆ ಗೊಳಿಸಲು ಭಜನೆಯು ಸಹಕಾರಿಯಾಗಿದೆ. ಖಾವಂದರು ಇಡೀ ಕರ್ನಾಟಕದಲ್ಲಿ ಕುಣಿತ ಭಜನೆಯ ಸಂಸ್ಕೃತಿಯನ್ನು ಕಲಿಸುತ್ತಿದ್ದಾರೆ ಇದು ಅವರ ವಿದ್ಯಾಸಂಸ್ಥೆಯಲ್ಲೂ ಉದ್ಘಾಟಿಸುವ ಭಾಗ್ಯ ನನ್ನದಾಗಿದೆ ಎಂದರು .

ವೇದಿಕೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕಿ  ಹೇಮಲತಾ ಎಂ. ಆರ್. ಉಪಸ್ಥಿತರಿದ್ದರು. ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಬಿ. ಸೋಮಶೇಖರ ಶೆಟ್ಟಿ ಅವರು ಮಾತಾಡಿ ಭಜನೆ ಮಾಡುವ ಸಂಸ್ಕೃತಿ ಯಿಂದ ಮನ ಶುದ್ಧೀಕರಣ ವಾಗುತ್ತದೆ, ದುಗುಡ ದುಮ್ಮಾನ ಗಳು ದೂರ ವಾಗುತ್ತೆ,
ಪಾಪವನ್ನುತೊಳೆಯುವ ಕಾರ್ಯ ದೇವರ ನಾಮ ಸ್ಮರಣೆ, ಭಜನೆ ಮಾಡುವ ಉತ್ತಮ ಸಂಸ್ಕೃತಿ ಯನ್ನು ಎಲ್ಲರೂ ಬೆಳೆಸಿ ಕೊಳ್ಳೋಣ ಎಂದರು .

ಭಜನಾ ಗುರುಗಳಾದ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ತೃತೀಯ ಬಿಕಾಂನ ವಿದ್ಯಾರ್ಥಿ ವಿನ್ಯಾಸ್ ಭಂಡಾರಿ ಇಡ್ಯಾಲರಿಗೆ ಸನ್ಮಾನ ನಡೆಯಿತು. ಮಕ್ಕಳು ಕುಣಿತ ಭಜನೆಗಳಿಂದ ಎಲ್ಲರ ಮನಸ್ಸನ್ನು ಮುದಗೊಳಿಸಿದರು. ವಿದ್ಯಾರ್ಥಿ ಸಿಂಚನ ಕಾರ್ಯಕ್ರಮ ನಿರೂಪಿಸಿ , ಭಜನೆಯ ಸಂಯೋಜಕ ಶಿಕ್ಷಕಿ ಶೀಮತಿ ಪ್ರಮೀಳಾ ಸ್ವಾಗತಿಸಿದರು , ಸಹ ಶಿಕ್ಷಕರಾದ ಶ್ರೇಯಾಂಸ ಜೈನ್ ವಂದಿಸಿದರು. ಕಾರ್ಯಕ್ರಮವನ್ನು  ಪ್ರಮಿಳ ಸಂಘಟಿಸಿದರು.

Exit mobile version