ಉಜಿರೆ ಅಂಗಡಿಗಳಿಂದ ಕಳ್ಳತನ

0

ಉಜಿರೆ: ಇಲ್ಲಿನ ಕಾಲೇಜು ರಸ್ತೆಯ ಫ್ಯಾನ್ಸಿ ಅಂಗಡಿ ಹಾಗೂ ಬಟ್ಟೆ ಅಂಗಡಿವೊಂದರ ಬೀಗ ಒಡೆದು ಕಳ್ಳತನ ನಡೆಸಿದ ಕುರಿತು ತಿಳಿದುಬಂದಿದೆ.

ಫ್ಯಾನ್ಸಿ ಅಂಗಡಿಯಿಂದ ರೂ.9,000 ನಗದು ಹಾಗೂ ಬಟ್ಟೆ ಅಂಗಡಿಯಿಂದ ಚಿಲ್ಲರೆ ಹಣವನ್ನು ಕಳ್ಳರು ದೋಚಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಅಹರ್ನಿಶಿ ಜನ,ವಾಹನ ಓಡಾಟವಿರುವ ಪೇಟೆಯ ಹೃದಯ ಭಾಗದಲ್ಲೆ ಕಳ್ಳತನ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here