Site icon Suddi Belthangady

ಎಕ್ಸೆಲ್ ನಲ್ಲಿ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮ

ಗುರುವಾಯನಕೆರೆ:   ವಿದ್ಯಾರ್ಥಿಗಳಿಗೆ ಉನ್ನತ ಗುರಿ ಇರಬೇಕು. ಹಾಗಿದ್ದಾಗ ನಕ್ಷತ್ರವನ್ನು ಮುಟ್ಟಲು ಸಾಧ್ಯವಾಗದಿದ್ದರೂ ಚಂದ್ರನವರೆಗಾದರೂ ತಲುಪಲು ಸಾಧ್ಯ ಎಂದು ವಿಶ್ರಾಂತ ಪ್ರಾಚಾರ್ಯ, ಖ್ಯಾತ ವಾಗ್ಮಿ ಪ್ರೊ. ಬಿ ವಿ ಸೂರ್ಯನಾರಾಯಣ ಹೇಳಿದರು.

ಅವರು ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ” ಖಚಿತ ಗುರಿ, ಸತತ ಪರಿಶ್ರಮ, ನಿರಂತರ ಅಭ್ಯಾಸ ವಿದ್ಯಾರ್ಥಿಗಳ ಕನಸುಗಳನ್ನು ನನಸು ಮಾಡುತ್ತದೆ ” ಎಂದರು.

ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್  ಪ್ರಾಸ್ತಾವಿಕ ಭಾಷಣ ಮಾಡಿದರು. ಹಿರಿಯ ವಿದ್ಯಾರ್ಥಿಗಳಾದ ಆಗ್ನೇಯ ಡಿ ಎ, ಆದಿತ್ಯ ಕಾರಂತ್ ಪರೀಕ್ಷಾ ತಯಾರಿಯ ಬಗ್ಗೆ ಹೇಳಿ, ತಮ್ಮ ಸಾಧನೆಗೆ ಎಕ್ಸೆಲ್ ಕಾಲೇಜು ಅಡಿಗಲ್ಲಾದುದನ್ನು ಸ್ಮರಿಸಿದರು .

ವಿದ್ಯಾರ್ಥಿಗಳಾದ ಧನ್ವಿ, ಸಂಯುಕ್ತ ಪ್ರಭು,ರೂಪಶ್ರೀ, ಅಭಿಷೇಕ್, ವೈಭವ್, ನಕ್ಷತ್ರ, ರಿಶ್ವಿತ್, ಚಿಂತನ್ ಶೈಕ್ಷಣಿಕ ಸ್ಪಂದನ ಸಂವಾದ ನಡೆಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಅಭಿರಾಮ್ ಬಿ ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.

ಹಿಂದಿ ವಿಭಾಗದ ಮುಖ್ಯಸ್ಥರಾದ ಪುರುಷೋತ್ತಮ್ ಸ್ವಾಗತಿಸಿದರು. ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ ನಿರೂಪಿಸಿದರು. ಅಕಾಡೆಮಿಕ್ ಕೋ ಆರ್ಡಿನೆಟರ್ ನಿಶಾ ಪೂಜಾರಿ ವಂದಿಸಿದರು.

Exit mobile version