ನಾವೂರು ಗ್ರಾಮ ಪಂಚಾಯತ್ ಗ್ರಾಮ ಸಭೆ

ನಾವೂರು:  ಗ್ರಾಮ ಪಂಚಾಯತ್ ನ  ಗ್ರಾಮ ಸಭೆ ನ.18 ರಂದು ನಾವೂರು ಶಾಲೆಯಲ್ಲಿ ಜರುಗಿತು.ಪಂಚಾಯತ್ ಅಧ್ಯಕ್ಷ ಗಣೇಶ್ ನೆಲ್ಲಿಪಲ್ಕೆ ಅಧ್ಯಕ್ಷತೆಯಲ್ಲಿ ನೆರವೇರಿತು. ಕೃಷಿ ಇಲಾಖೆಯ ನೋಡಲ್ ಅಧಿಕಾರಿ ರಂಜಿತ್ ಕುಮಾರ್ ಗ್ರಾಮ ಸಭೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಇಲಾಖೆಯ ಮಾಹಿತಿಯನ್ನು ನೀಡಿದರ ವಿವಿಧ ಇಲಾಖೆಯ  ಅಧಿಕಾರಿಗಳು ಆಯಾ ಇಲಾಖೆಯ ಮಾಹಿತಿ ನೀಡಿದರು.

ಅರಣ್ಯ ಇಲಾಖೆ,ಶಿಕ್ಷಣ ಇಲಾಖೆ, ಮೆಸ್ಕಾಂ, ಪೊಲೀಸ್ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಗ್ರಾಮಸ್ಥರು ಮುಂದಿಟ್ಟಾಗ  ಸೂಕ್ತ ಪರಿಹಾರವನ್ನು ಕಲ್ಲಿಸುವಲ್ಲಿ ಗ್ರಾಮಸಭೆಯು  ಯಶಸ್ವಿಯಾಯಿತು.

ಈ ಸಂದರ್ಭದಲ್ಲಿ ಸದಸ್ಯರಾದ ಹರೀಶ್ ಸಾಲಿಯಾನ್, ಹಸೈನರ್, ಬಾಲಕೃಷ್ಣ, ಪ್ರಿಯಾ, ಲಕ್ಷ್ಮಣ್, ಸುನಂದ, ವೇದಾವತಿ ,ಶಾಂತಿ, ಪಿ ಡಿ ಓ ವೆಂಕಟಕೃಷ್ಣ, ಕಾರ್ಯದರ್ಶಿ ಮೋನಮ್ಮ ವಿವಿಧ ಇಲಾಖೆಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಗಣೇಶ್ ನೆಲ್ಲಿಪಲ್ ಕೆ ಸ್ವಾಗತಿಸಿ,  ಹರೀಶ್ ಸಾಲಿಯಾನ್ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಗ್ರಾಮ ಸಭೆ ಮುಕ್ತಾಯಗೊಂಡಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.