Site icon Suddi Belthangady

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ 10ನೇ ವರ್ಷದ ಪಾದಯಾತ್ರೆ: 15 ಸಾವಿರಕ್ಕೂ ಮಿಕ್ಕಿ ಭಕ್ತರು ಭಾಗಿ


ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಶುಭ ಸಂದರ್ಭದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಧರ್ಮಸ್ಥಳದವರೆಗೆ 10ನೇ ವರ್ಷದ (ದಶಮಾನೋತ್ಸವ)ಪಾದಯಾತ್ರೆ ನ.19ರಂದು ಜರುಗಿತು.

ತಾಲೂಕಿನ ವಿವಿಧ ಗ್ರಾಮಗಳ ಹಾಗೂ ಹೊರ ತಾಲೂಕಿನ ಸುಮಾರು 15 ಸಾವಿರಕ್ಕೂ ಮಿಕ್ಕಿ ಜನರು ಭಾಗವಹಿಸಿದ್ದು,  ವಿವಿಧ ಯಕ್ಷಗಾನವೇಷ ಭೂಷಣಗಳು, ಭಜನಾ ತಂಡಗಳು ಪಾದಯಾತ್ರೆಯ ವಿಶೇಷ ಆಕರ್ಷಣೆಯಾಗಿದೆ.

ಉಜಿರೆ ದೇವಸ್ಥಾನದ ವಠಾರದಲ್ಲಿ ಮಧ್ಯಾಹ್ನ ಶ್ರೀ ಭಗವಾನ್ ಶಿರಡಿಸಾಯಿ ಸತ್ಯಸಾಯಿ ಸೇವಾ ಕ್ಷೇತ್ರ ಹಳೆಕೋಟೆ ಬೆಳ್ತಂಗಡಿ ಇವರಿಂದ ಭಜನಾ ಸಂಕಿರ್ತನೆ ನಡೆಯಿತು. ಬಳಿಕ ಶ್ರೀ ಜನಾರ್ಧನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯರವರು ದೀಪ ಪ್ರಜ್ವಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕರುಗಳಾದ ಕೆ.ಹರೀಶ್ ಕುಮಾರ್, ಕೆ.ಪ್ರತಾಪಸಿಂಹ ನಾಯಕ್, ಪೂರಣ್ ವಮ೯, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್ ಮಂಜುನಾಥ್, ಅಖಿಲ ಕರ್ನಾಟಕ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರಾಮಸ್ವಾಮಿ, ತಾಲೂಕು ಅಧ್ಯಕ್ಷೆ ಶಾರದಾ ಆರ್.ರೈ,, ಕೆ.ಎನ್ ಜನಾರ್ದನ್, ಉದ್ಯಮಿ ಮೋಹನ ಶೆಟ್ಟಿಗಾರ್, ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್, ಉದ್ಯಮಿ ರಾಘವೇಂದ್ರ ಬೈಪಾಡಿತ್ತಾಯ, ಸಂಧ್ಯಾ ಟ್ರೆಡರ್‍ಸ್‌ನ ರಾಜೇಶ್ ಪೈ, ಮಮತಾ ರಾವ್, ವಿವೇಕ್ ವಿನ್ಸೆಂಟ್ ಪಾಯಿಸ್, ಮಮತಾ ಎಂ. ಶೆಟ್ಟಿ, ರಾಜಶೇಖರ ಅಜ್ರಿ, ಶಶಿಧರ ಕಲ್ಮಂಜ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಶ್ರೀನಾಥ್, ನ್ಯಾಯವಾದಿ ಧನಂಜಯ ರಾವ್, ಅಡೂರು ವೆಂಕಟ್ರಾವ್, ಜಯಂತ್ ಶೆಟ್ಟಿ, ಲೋಕೇಶ್ವರಿ ವಿನಯಚಂದ್ರ, ತಿಮ್ಮಪ್ಪ ಗೌಡ ಬೆಳಾಲು, ವಸಂತ ಮಜಲು, ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ವಿಠಲ ಶೆಟ್ಟಿ ಲಾಯಿಲ, ಶಂಕರ ಹೇಡ್ಯ, ಯೋಗೀಶ್ ಕುಮಾರ್ ನಡಕ್ಕರ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರುಗಳಾದ ಪಿ.ಕೆ ರಾಜು ಪೂಜಾರಿ ಕಾಶಿಪಟ್ಣ, ಡಿ.ಎ ರಹಿಮಾನ್, ತಿಮ್ಮಪ್ಪ ಗೌಡ, ಕಿಶೋರ್ ಹೆಗ್ಡೆ, ವಲಯ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ಪುಷ್ಪರಾಜ ಹೆಗ್ಡೆ, ನಾಮದೇವ ರಾವ್ ಮುಂಡಾಜೆ, ಮಂಜುನಾಥ ಕಾಮತ್ ಕೊಲ್ಲಿ, ರಾಘವೇಂದ್ರ ಡಾ. ಶ್ರೀಧರ್ ಭಟ್ , ಬೈಪಡಿತ್ತಾಯ, ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಯಶವಂತ್ ಕುಮಾರ್, ಲಕ್ಷ್ಮಣ ಗೌಡ, ತಾಲೂಕಿನ ಗಣ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟಗಳ ಪದಾಧಿಕಾರಿಗಳು, ಜ್ಞಾನವಿಕಾಸ ಕೇಂದ್ರದ ಸದಸ್ಯರು, ನಾಗರಿಕರು, ಹೆಗ್ಗಡೆ ಅಭಿಮಾನಿಗಳು ಮೆರವಣಿಗೆಯ ಜೊತೆ ಸಾಗಿದರು.

Exit mobile version