Site icon Suddi Belthangady

8 ರಿಂದ 10 ಗಂಟೆ ನಿರಂತರವಾಗಿ ಹಾರಾಟ ನಡೆಸುವ ಆಂಗುಲೈರ್ ಕಂಪೆನಿಯ ಏರ್ ಸೈಟ್-1 ಡ್ರೋನ್

ನಿಡ್ಲೆ : ನಿಡ್ಲೆಯಲ್ಲಿ ಸ್ಥಾಪಿತವಾದ ಪ್ರಥಮ ಡ್ರೋನ್ ಮತ್ತು ರೋಬೋಟ್ ತಂತ್ರಜ್ಞಾನದ ಕಂಪನಿ ಅಂಗುಲೈರ್ ಇದೀಗ ಮತ್ತೊಂದು ಆವಿಷ್ಕಾರ ಮತ್ತು ಮೈಲಿಗಲ್ಲು ಸ್ಥಾಪಿಸಿದ್ದು. ಬೆಂಗಳೂರಿನ ಟೆಕ್ ಶೃಂಗದಲ್ಲಿ ಸತತ 8ಗಂಟೆಗಳ ಕಾಲ ಹಾರಾಡಿದೆ.

8ರಿಂದ 10 ಗಂಟೆ ನಿರಂತರವಾಗಿ ಹಾರಾಟ ನಡೆಸುವ ಮಂಗಳೂರಿನ ಆಂಗುಲರ್ ಕಂಪೆನಿಯ ಏರ್ ಸೈಟ್-1 ಡ್ರೋನ್ ಗಳು ದೇಶದ ಗಡಿ ಕಾಯುವ ಸೈನಿಕರ ಬಳಕೆಗೆ ಉಪಯೋಗವಾಗುತ್ತಿದೆ.

ಸಾಮಾನ್ಯವಾಗಿ ಬ್ಯಾಟರಿ ಮೂಲಕ ಹಾರಾಟ ನಡೆಸುವ ಡ್ರೋನ್ ಗಳು ಕೆಲ ನಿಮಿಷ ಅಥವಾ ಗಂಟೆಯ ಬಳಿಕ ಪುನಃ ಚಾರ್ಜ್ ಗಾಗಿ ಭೂಮಿಗಿಳಿಯಬೇಕು. ಆದರೆ ಈ ಕಂಪೆನಿ ತಯಾರಿಸಿದ ಡ್ರೋನ್ ಗಳು 230 ವೋಲ್ಟ್ ವಿದ್ಯುತ್ ಬಳಸಿಕೊಂಡು ಅಥವಾ ಜನರೇಟರ್ ಸಹಾಯ ದಿಂದಲೂ ಹಾರಾಟ ನಡೆಸಲಿದೆ. ಇದರ ಬೆಲೆ ರೂ 30 ಲಕ್ಷ ಆಗಿದ್ದು ಮಾರುಕಟ್ಟೆ ಪಾಲುದಾರರ ಮೂಲಕ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. 100ಮೀ ಎತ್ತರದವರೆಗೂ ಈ ಡ್ರೋನ್ ಹಾರಾಟ ನಡೆಸಲಿದ್ದು ಎತ್ತರಕ್ಕೆ ಹಾರುತ್ತಿದ್ದಂತೆ ಈ ಡ್ರೋನ್ ಹಾರಾಟ ನಡೆಸಲಿದ್ದು ಎತ್ತರಕ್ಕೆ ಹಾರುತ್ತಿದ್ದಂತೆ ಸ್ವಯಂಚಾಲಿತವಾಗಿ ವೈರ್ ಬಿಚ್ಚಿಕೊಳ್ಳುವುದು , ಸುತ್ತಿಕೊಳ್ಳುವುದು ವಿಶೇಷವಾಗಿದೆ.

ಸಂಸ್ಥೆಯ ನಿರ್ದೇಶಕ ಅತಿಶಯ್ ಜೈನ್ ಹಾಗೂ ತಂಡದವರು  ಬೆಂಗಳೂರಿನ ಟೆಕ್ ಶೃಂಗದಲ್ಲಿ ಡ್ರೋನ್ ಬಗ್ಗೆ  ಮಾಹಿತಿಯನ್ನು ನೀಡಿದರು.

 

Exit mobile version