Site icon Suddi Belthangady

ಧರ್ಮಸ್ಥಳದಲ್ಲಿ ಸುಸಜ್ಜಿತ ಸೌಕರ್ಯಗಳ ವಿನೂತನ ಶೈಲಿನ `ಅಯೋಧ್ಯ ಆತಿಥ್ಯ’ ಹೋಟೆಲ್ ಶುಭಾರಂಭ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಸಹ್ಯಾದ್ರಿ ವಸತಿಗೃಹದ ಬಳಿ ನೂತನವಾಗಿ ಆರಂಭಗೊಂಡ ಎಲ್ಲಾ ಸುಸಜ್ಜಿತ ಸೌಕರ್ಯಗಳಿರುವ, ವಿನೂತನ ಶೈಲಿಯ `ಅಯೋಧ್ಯ ಆತಿಥ್ಯ ಹೋಟೆಲ್’ ನ.16 ರಂದು ವಿದ್ಯುಕ್ತವಾಗಿ ಶುಭಾರಂಭಗೊಂಡಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮತ್ತು ಶ್ರೀಮತಿ ಸುಪ್ರೀಯಾ ಹರ್ಷೇಂದ್ರ ಕುಮಾರ್ ಅವರು ನೂತನ ಸಂಸ್ಥೆ ಅಯೋಧ್ಯ ಆತಿಥ್ಯವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ನಂತರ ಹೋಟೆಲ್‌ನ ಸಂಪೂರ್ಣ ಹೊಸ ವ್ಯವಸ್ಥೆಯನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಧರ್ಮಸ್ಥಳಕ್ಕೆ ಬರುವ ಗ್ರಾಹಕರಿಗೆ ಉತ್ತಮ ಸೇವೆ ಈ ಸಂಸ್ಥೆಯ ಮೂಲಕ ದೊರೆಯಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಬಿ.ಅಪ್ಪಣ್ಣ ಹೆಗ್ಡೆಯವರು ಭಾಗವಹಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳದ ಮತ್ಸದ್ಧಿ ಬಿ.ಭುಜಬಲಿ, ಅಯೋಧ್ಯ ಆತಿಥ್ಯದ ಪಾಲುದಾರರಾದ ನವೀನ್ ಶೆಟ್ಟಿ, ಜೀವನ್ ಶೆಟ್ಟಿ, ಪ್ರಮುಖರಾದ ದೀಲೀಪ್ ಶೆಟ್ಟಿ, ಅಖೀಲೇಶ್ ಹೆಗ್ಡೆ, ಅಕ್ಷಯ್ ಜೈನ್ ಅಳದಂಗಡಿ, ಸಂಸ್ಥೆಯ ಮಾಲಕರ ಕುಟುಂಬ ವರ್ಗ, ಬಂದು- ಮಿತ್ರರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಗ್ರಾಹಕರಿಗೆ ನಗುಮೊಗದ ಸೇವೆಯಿಂದ ಸಂಸ್ಥೆಯ ಉನ್ನತಿ: ಡಾ. ಹೆಗ್ಗಡೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ನ.೧೫ ರಂದು ಆಗಮಿಸಿ ಶುಭಾಶೀರ್ವಾದ ಮಾಡಿದರು. ಧರ್ಮಸ್ಥಳಕ್ಕೆ ಬರುವ ಭಕ್ತರ ಅಗತ್ಯಗಳನ್ನು ಪೂರೈಸಲು ಇಂತಹ ಸಂಸ್ಥೆಗಳು ಬೇಕು. ಇಲ್ಲಿ ಗ್ರಾಹಕರಿಗೆ ನಗುಮುಖದ ಸೇವೆ ದೊರೆಯಲಿ. ಇದರಿಂದ ಗ್ರಾಹಕರು ಸಂತುಷ್ಟಗೊಂಡಾಗ ಸಂಸ್ಥೆಯ ಉನ್ನತಿಯೂ ಸಾಧ್ಯವಾಗುತ್ತದೆ ಎಂದು ಹೇಳಿದರು. ಸಂಸ್ಥೆಯ ಪಾಲುದಾರರು ಡಾ. ಹೆಗ್ಗಡೆಯವರನ್ನು ಗೌರವಪೂರ್ವಕ ಸ್ವಾಗತಿಸಿದರು.

Exit mobile version