Site icon Suddi Belthangady

ಲಾಯಿಲ ಸ. ಹಿ. ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ


ಲಾಯಿಲ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಲಾಯಿಲದಲ್ಲಿ ಮಕ್ಕಳ ದಿನಾಚರಣೆಯು ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ  ಆಶಾ ಸಾಲ್ದಾನ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಶಾಲಾ ನಾಮ ನಿರ್ದೇಶಕರು ಹಾಗೂ ಗ್ರಾಮ ಪಂಚಾಯತ್ ಸದಸ್ಯ  ಪ್ರಸಾದ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸೂರಪ್ಪ ರವರು ಉಪಸ್ಥಿತರಿದ್ದು ಶುಭ ಕೋರಿದರು.

ಶಾಲಾ ಹಳೆ ವಿದ್ಯಾರ್ಥಿ ಆದರ್ಶ್ ಭಟ್ ಕುಂಡಡ್ಕ ಅವರು ಮಕ್ಕಳ ದಿನಾಚರಣೆ ಪ್ರಯುಕ್ತ ನಡೆಸಿದ ಆಟೋಟ ಸ್ಪರ್ಧಿಗಳಿಗೆ ಬಹುಮಾನ ಕೊಟ್ಟು ಸಿಹಿ ತಿಂಡಿ ವಿತರಿಸಿ ಶುಭ ಕೋರಿದರು. ಶಾಲಾ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಗಳು ಸಹಕರಿಸಿದರು. ಮಕ್ಕಳು ಪಾಯಸದ ಊಟ ಮಾಡಿ ಸಂಭ್ರಮಿಸಿದರು.

Exit mobile version