Site icon Suddi Belthangady

ಮಾಲಾಡಿ ಗ್ರಾ.ಪಂ ದ್ವಿತೀಯ ಹಂತದ ಗ್ರಾಮ ಸಭೆ

ಮಾಲಾಡಿ: ಮಾಲಾಡಿ ಗ್ರಾಮ ಪಂಚಾಯತ್ ಗ್ರಾಮ ಸಭೆಯು ನ.14ರಂದು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಜರುಗಿತು .

ಅಧ್ಯಕ್ಷತೆಯನ್ನು  ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಸ್ಸನಾ ವಹಿಸಿದ್ದರು.

ಮಾರ್ಗದರ್ಶಿ ಅಧಿಕಾರಿಯಾಗಿ ಪಶು ವೈದ್ಯಾಧಿಕಾರಿ ವಿನಯ್ ಕುಮಾರ್ ರವರು ಭಾಗವಹಿಸಿ ಗ್ರಾಮ ಸಭೆ ಯನ್ನು ನಡೆಸಿಕೊಟ್ಟರು. ಗ್ರಾಮ ಪಂಚಾಯತ್ ಸದಸ್ಯೆ  ತುಳಸಿ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ. ಕಾರ್ಯಕ್ರಮ ನಿರೂಪಿಸಿ. ಗ್ರಾಮ ಪಂಚಾಯತ್ ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯತ್ ನ ನಡಾವಳಿ ಗಳನ್ನು ಹಾಗೂ ಲೆಕ್ಕ ಪತ್ರ ಕಾರ್ಯದರ್ಶಿ ಯಶೋಧರ ಶೆಟ್ಟಿ ಮಂಡಿಸಿದರು. ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕರ್ಕೇರ, ಗ್ರಾಮ ಪಂಚಾಯತ್ ಸದಸ್ಯರು,ಇಲಾಖಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಉಪಸ್ಥಿತರಿದ್ದರು. ಸಿಬ್ಬಂದಿ  ಗೀತಾ ವಂದಿಸಿದರು.

 

Exit mobile version