Site icon Suddi Belthangady

ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 13ನೇ ಮಡಂತ್ಯಾರು ಶಾಖೆ ಉದ್ಘಾಟನೆ

ಮಡಂತ್ಯಾರು : ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿ ಜಿಲ್ಲೆಯಲ್ಲಿ ತನ್ನ 12 ಶಾಖೆಗಳ ಮೂಲಕ 2021-22ನೇ ಸಾಲಿನಲ್ಲಿ ರೂ. 506.59 ಕೋಟಿ ವ್ಯವಹಾರ ನಡೆಸಿ ದಾಖಲೆಯ ರೂ 1.20 ಕೋಟಿ ಲಾಭಾಂಶ ಗಳಿಸಿರುವ ಆದರ್ಶ ವಿವಿಧೋದ್ಧೇಶ ಸಹಕಾರ ಸಂಘದ 13ನೇ ಶಾಖೆಯು ನ.14ರಂದು ಮಡಂತ್ಯಾರು ಪೊಂಪೈ ಸಂಕೀರ್ಣದಲ್ಲಿ ಉದ್ಘಾಟನೆಗೊಂಡಿತು.

ಶಾಸಕ ಹರೀಶ್ ಪೂಂಜಾ ಮಡಂತ್ಯಾರು ಶಾಖೆಯನ್ನು  ಉದ್ಘಾಟನೆಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ವಹಿಸಿದ್ದರು. ಮಡಂತ್ಯಾರ್ ಸೆಕ್ರೆಡ್ ಹಾರ್ಟ್ ಚರ್ಚ್ ನ ಧರ್ಮಗುರು ರೆ. ಫಾ. ಬೇಸಿಲ್ ವಾಸ್, ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಮಡಂತ್ಯಾರು ನಿವೃತ್ತ ಉಪತಹಶೀಲ್ದಾರ್  ಬಿ.ಅಬ್ದುಲ್ ರಹಿಮಾನ್ ಕಂಪ್ಯೂಟರ್ ಉದ್ಘಾಟನೆಯನ್ನು ನೆರವೇರಿಸಿದರು. ಪಾರೆಂಕಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ ವಿಠ್ಠಲ ಶೆಟ್ಟಿ ಮೂಡಯೂರು ಪ್ರಥಮ ಠೇವಣಿ ಪತ್ರ ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ  ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ  ಬೇಬಿ ಸುಸ್ಸಾನ, ಮಡಂತ್ಯಾರು ಉದ್ಯಮಿ, ಅಧಿಕಾರಿ ಪಿ.ಅನಿಲ್ ಕುಮಾರ್ , ಮಡಂತ್ಯಾರು ಪೊಂಪೈ ಸಂಕೀರ್ಣ ಕಟ್ಟಡ ಮಾಲಕ ಜೇಸನ್ ರೋಡ್ರಿಗಸ್ ಇನ್ನಿತರ ಗಣ್ಯರು ಗೌರವ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆದರ್ಶ ವಿವಿಧೋದ್ಧೇಶ ಸಹಕಾರ ಸಂಘದ  ಉಪಾಧ್ಯಕ್ಷ ಎನ್ ಸುಂದರ ರೈ, ಶಾಖಾ ವ್ಯವಸ್ಥಾಪಕ ಆಶಿಕ್ ಕುಮಾರ್, ಮಹಾಪ್ರಬಂಧಕರು ವಸಂತ್ ಜಾಲಾಡಿ    ನಿರ್ದೇಶಕರುಗಳಾದ ಕೆ. ರವೀಂದ್ರನಾಥ್ ಶೆಟ್ಟಿ ಕೇನ್ಯ, ವಿ.ವಿ ನಾರಾಯಣ ಭಟ್ ನರಿಮೊಗರು, ಎನ್ ಜಯಪ್ರಕಾಶ್ ರೈ ಚೊಕ್ಕಾಡಿ, ಅಶ್ವಿನಿ ಎಲ್ ಶೆಟ್ಟಿ  ಸವಣೂರು, ಸೀತಾರಾಮ ಶೆಟ್ಟಿ ಬಿ ಮಂಗಳೂರು, ಪೂರ್ಣಿಮಾ ಎಸ್ ಆಳ್ವ ಮಂಗಳೂರು, ಯಮುನಾ ಎಸ್ ರೈ ಗುತ್ತುಪಾಲ್, ಬಿ ಮಹಾಬಲ ರೈ ಬೋಳಂತೂರು, ಎಸ್ ಎಂ ಬಾಪು ಸಾಹೇಬ್ ಸುಳ್ಯ, ಎನ್ ರಾಮಯ್ಯ ರೈ ತಿಂಗಳಾಡಿ, ಚಿಕ್ಕಪ್ಪ ನಾಯ್ಕ್ ಅರಿಯಡ್ಕ, ಜೈರಾಜ್ಭಂಡಾರಿ ಪುತ್ತೂರು, ಮಹಾದೇವ ಎಂ ಮಂಗಳೂರು ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಆದರ್ಶ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಕೆ ಸೀತಾರಾಮ ರೈ ಸವಣೂರು ಸ್ವಾಗತಿಸಿದರು.

 

Exit mobile version