Site icon Suddi Belthangady

ಗುರುದೇವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ


ಬೆಳ್ತಂಗಡಿ : ‘ಕ್ರೀಡೆಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಾಧಕರಾಗುವುದು ಬಹು ಅಪರೂಪ. ಆದರೆ ನಮಗೆ ಸಿಗುವ ಅವಕಾಶಗಳನ್ನು ಚೆನ್ನಾಗಿ ಉಪಯೋಗಿಸಿಕೊಂಡು, ಅದರಲ್ಲಿ ಶ್ರದ್ಧೆಯನ್ನು ರೂಢಿ ಸಿಕೊಂಡಾಗ ಮಹಾನ್ ಸಾಧಕರಾಗಿ ಮೂಡುವುದರಲ್ಲಿ ಅನುಮಾನವಿಲ್ಲ’ ಎಂದು ಮಾಜಿ ಶಾಸಕ ಶ್ರೀ ಗುರುದೇವ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.

ಅವರು ನ.11 ರಂದು ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಮತ್ತು ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕ್ರೀಡೆಯಲ್ಲಿ ಭಾಗವಹಿಸುವ ಮನಸ್ಸು ಮತ್ತು ಕ್ರೀಡಾ ಸ್ಫೂರ್ತಿಯ ಮನಸ್ಸು ನಮ್ಮಲ್ಲಿ ಸದಾ ಇರಬೇಕು. ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿ ಬೆಳೆದರೆ ಮಾತ್ರ ಬದುಕಿನ ಭವಿಷ್ಯದಲ್ಲಿ ಬೆಳೆಯಲು ಸಾಧ್ಯ’ ಎಂದರು.

ಉಜಿರೆ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ನಿಲಯ ಮೇಲ್ವಿಚಾರಕ ಕೃಷ್ಣಪ್ಪ ಎ.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ ಕಳೆದುಹೋದ ಬದುಕು ನಮಗೆ ಮರಳಿ ಸಿಗುವುದಿಲ್ಲ. ಹಾಗಾಗಿ ನಮ್ಮ ಬದುಕಿಗೆ ಪೂರಕವಾದ ಅವಕಾಶಗಳು ಎಲ್ಲೆ ಸಿಕ್ಕರೂ ಅದನ್ನು ಚೆನ್ನಾಗಿ ಬಳಸಿಕೊಳ್ಳುವಂತಿರಬೇಕು’ ಎಂದರು.

ಕರ್ಣಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರೆಂಶಿ ಮಹಮ್ಮದ್ ನದೀಮ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ ಶುಭ ಹಾರೈಸಿದರು.

ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಶಮೀವುಲ್ಲ ಬಿ. ಎ.ಉಪಸ್ಥಿತರಿದ್ದರು.

ಬಿ. ಎ. ವಿದ್ಯಾರ್ಥಿನಿ ತೇಜಶ್ರೀ ಪ್ರತಿಜ್ಞಾ ವಿಧಿ ಬೋಧಿಸಿದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕ ಹರೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕಿ ದೀಪಾ ಎಸ್ ಸುವರ್ಣ ವಂದಿಸಿದರು. ಕಾಲೇಜಿನ ವಾರ್ಷಿಕ ಕ್ರೀಡಾಕೂಟದಲ್ಲಿ ಕೃಷ್ಣಪ್ಪ ಎ. ಹಾಗೂ ರೆಂಶಿ ಮಹಮ್ಮದ್ ನದಿಂ ಇವರನ್ನು ಸನ್ಮಾನಿಸಲಾಯಿತು.

Exit mobile version