Site icon Suddi Belthangady

ಬೆಳಾಲು ಶ್ರೀ ಧ. ಮಂ. ಪ್ರೌಢ ಶಾಲೆಗೆ “ಉತ್ತಮ ಕನ್ನಡ ಶಾಲೆ” ರಾಜ್ಯ ಮಟ್ಟದ ಪುರಸ್ಕಾರ

ಬೆಳಾಲು: ಬೆಳಾಲು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯು , ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಿ. ಕರ್ನಾಟಕ ರಾಜ್ಯ ಇವರು ಈ ವರ್ಷದಿಂದ ಕೊಡಮಾಡುವ ರಾಜ್ಯ ಮಟ್ಟದ “ಉತ್ತಮ ಖಾಸಗಿ ಕನ್ನಡ ಶಾಲೆ” ಪುರಸ್ಕಾರವನ್ನು ಪಡೆದಿದೆ.

ಈ ಪುರಸ್ಕಾರಕ್ಕೆ ರಾಜ್ಯದಿಂದ ಇಪ್ಪತ್ತು ಶಾಲೆಗಳು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಶಾಲೆಗಳು ಆಯ್ಕೆ ಆಗಿದ್ದು , ಬೆಳ್ತಂಗಡಿ ತಾಲೂಕಿನಿಂದ ಆಯ್ಕೆ ಆಗಿರುವ ಏಕೈಕ ಶಾಲೆಯಾಗಿದೆ.
ನ.13 ರಂದು ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ನಡೆದ ಸಮ್ಮಾನ ಕಾರ್ಯಕ್ರಮದಲ್ಲಿ, ಉದ್ಘಾಟಕರಾಗಿ ಆಗಮಿಸಿದ ಖ್ಯಾತ ಸಾಹಿತಿ ಡಾ. ನಾ. ಮೊಗಸಾಲೆ ಮತ್ತು ಕಲ್ಲಡ್ಕ ಡಾ. ಪ್ರಭಾಕರ ಭಟ್ ರವರು ಪುರಸ್ಕಾರವನ್ನು ಪ್ರದಾನ ಮಾಡಿದರು.

ಈ ಪುರಸ್ಕಾರವನ್ನು ಶಾಲೆಯ ಪರವಾಗಿ ಮಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಮತ್ತು ಶಿಕ್ಷಕರಾದ ವಾರಿಜ ಎಸ್ ಗೌಡ, ರಾಜಶ್ರೀ , ಜಗದೀಶ್, ಗಣೇಶ್ವರ್, ರವಿಚಂದ್ರ ಜೈನ್, ಸುಮನ್, ಚಿತ್ರಾರವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬೆಳಾಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಎಳ್ಳುಗದ್ದೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುಲೈಮಾನ್ ಭೀಮಂಡೆ, ಹಿರಿಯ ವಿದ್ಯಾರ್ಥಿಗಳಾದ ವೆಂಕಟೇಶ್ ತೋಡ್ತಿಲ್ಲಾಯ ಶ್ರದ್ಧಾ , ಬಾಲಕೃಷ್ಣ ಮುಂಡ್ರೊಟ್ಟು, ಗಣೇಶ್ ಕನಿಕ್ಕಿಲ, ಶಶಿಧರ ಕೊಲ್ಪಾಡಿ, ಶೇಖರ್ ಕೊಲ್ಲಿಮಾರ್, ನಿವೃತ್ತ ಗ್ರಂಥಪಾಲಕ ಜಿ. ಕೆ.ಕಂಬಾರ್, ಪೋಷಕರು ಮತ್ತು ವಿದ್ಯಾರ್ಥಿಗಳು ಜೊತೆಗಿದ್ದು ಸಮ್ಮಾನವನ್ನು ಸ್ವೀಕರಿಸಿದರು.

ಪುರಸ್ಕಾರದಲ್ಲಿ ಶಾಶ್ವತ ಫಲಕದೊಂದಿಗೆ ರೂ. ಹತ್ತು ಸಾವಿರದ ಗೌರವ ಧನವನ್ನೂ ಒಳಗೊಂಡಿದೆ.

Exit mobile version