Site icon Suddi Belthangady

ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ ಬಳ್ಳಮಂಜ ಇದರ 45ನೇ ವರ್ಷದ ಭಜನಾ ಸಪ್ತಾಹ

ಬಳ್ಳಮಂಜ:  ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ ಬಳ್ಳಮಂಜ ಇದರ 45ನೇ ವರ್ಷದ ಭಜನಾ ಸಪ್ತಾಹವು  ನ.1ರಿಂದ ನ.8 ರವರೆಗೆ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಜನೆ ಹಾಗೂ ವಿವಿಧ  ಸಾಂಸ್ಕೃತಿಕ   ಕಾರ್ಯಕ್ರಮಗಳೊಂದಿಗೆ ನಡೆಯಿತು

ನ.6 ರಂದು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸೆಕೋಡಿ ಸೂರ್ಯನ ಭಟ್ ಸದಸ್ಯರು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಇವರು ಮಾತನಾಡಿ ಮನಸ್ಸಿನಲ್ಲಿ ದೇವರ ಜ್ಞಾನವಿಟ್ಟು ಭಜನೆ ಮಾಡಿದರೆ ದೇವರು ಒಲಿವನು ಪ್ರತಿ ಮನೆ ಮನೆಯಲ್ಲಿ ಭಜನೆ ನಿರಂತರವಾಗಿ ನಡೆಯಲಿ ಎಂದರು.

ಗೌರವ ಉಪಸ್ಥಿತಿಯಲ್ಲಿ ಡಾ ಎಂ ಹರ್ಷ ಸಂಪಿಗೆತ್ತಾಯ ಆನುವಂಶಿಕ ಆಡಳಿತ ಮುಕ್ತೈಸರರು ಶ್ರೀ ಕ್ಷೇತ್ರ ಬಳ್ಳಮಂಜ,  ಸಂಘದ ಕಾರ್ಯದರ್ಶಿ ಯತೀಶ್ ರೈ ಇವರು ಉಪಸ್ಥಿತರಿದ್ದರು.

ನಿನ್ನೆ ರಾತ್ರಿ ಏಕಾಹ ಭಜನೆಯೊಂದಿಗೆ ಶ್ರೀ ದೇವರಿಗೆ ರಂಗ ಪೂಜೆ ದೀಪೋತ್ಸವ ದೊಂದಿಗೆ ಇಂದು ಬೆಳಿಗ್ಗೆ ಭಜನ ಮಂಗಲೋತ್ಸವ ನಡೆಯಿತು ಭಜನಾ ಮಂಡಳಿಯ ಅಧ್ಯಕ್ಷರಾದ ಕಿಶೋರ್ ಕುಮಾರ್,  ಕಾರ್ಯದರ್ಶಿ ಯತೀಶ್ ರೈ, ಕೋಶಾಧಿಕಾರಿ ಎಂ ವಿಜಯಚಂದ್ರ ಸಂಪಿಗೆತ್ತಾಯ ಹಾಗೂ ಸದಸ್ಯರು ಊರ ಭಕ್ತಾದಿಗಳು ಉಪಸ್ಥಿತರಿದ್ದರು.

Exit mobile version