Site icon Suddi Belthangady

ಸೂಳಬೆಟ್ಟು ಹಾ.ಉ.ಸ.ಸಂಘ: ಸಹಕಾರ ಭಾರತಿಗೆ ಭರ್ಜರಿ ಗೆಲವು


ಸೂಳಬೆಟ್ಟು: ಹಾಲು ಉತ್ಪಾದಕರ ಸಹಕಾರ ಸಂಘ ಸೂಳಬೆಟ್ಟು ಇದರ 13 ಸದಸ್ಯರ ಆಡಳಿತ ಮಂಡಳಿಗೆ ನ.4 ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯಿಂದ ಸ್ಪರ್ಧಿಸಿದ್ದ 10 ಮಂದಿ ವಿಜಯಿಯಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಕೆಲವೇ ದಿನಗಳಲ್ಲಿ ನಡೆಯಲಿದೆ.

ನಿರಂಜನ ಜೋಶಿ,ಹರೀಶ್ ಮಡಿವಾಳ, ಹರೀಶ್ ಪೂಜಾರಿ, ಮೋಹನ ಹೆಗ್ಡೆ, ಆನಂದ ಪ್ರಕಾಶ ಕುಟಿನ್ಹ, ಪ್ರಮೋದ ಪೂಜಾರಿ, ಜಗನ್ನಾಥ, ವನಿತಾ, ರೀಟಾ ಡಿ ಸೋಜ ಹಾಗೂ ಯಶೋದಾ ಸಹಕಾರ ಭಾರತಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.

Exit mobile version