Site icon Suddi Belthangady

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಎನ್ ಎಸ್ ಎಸ್ ಹಾಗೂ ಎನ್.ಸಿ.ಸಿ, ಯೂತ್ ರೆಡ್ ಕ್ರಾಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಮಡಂತ್ಯಾರು: ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಸೇಕ್ರೆಡ್ ಹಾರ್ಟ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಎನ್.ಸಿ.ಸಿ, ಯೂತ್ ರೆಡ್ ಕ್ರಾಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಇದರ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ 67 ನೇ ಕನ್ನಡ ರಾಜ್ಯೋತ್ಸವ ” ಕನ್ನಡವೆಂದರೆ ಬರಿಯ ನುಡಿಯಲ್ಲ” ಎಂಬ ಧ್ಯೇಯವಾಕ್ಯದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೋಸೆಫ್ ಎನ್ ಎಂ ಅವರು ಕನ್ನಡ ಸಾಹಿತ್ಯವನ್ನು ಓದುವುದರ ಮೂಲಕ, ಹಿರಿಯ ಕವಿಗಳು ರಚಿಸಿದ ಕನ್ನಡ ಹಾಡುಗಳ ಭಾವವನ್ನು ಗ್ರಹಿಸಿಕೊಳ್ಳುವುದರ ಮೂಲಕ ನಾವು ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಮನೆಯಲ್ಲಿ ನಾವು ಆಡುವ ಭಾಷೆ ಯಾವುದೇ ಇರಬಹುದು ನಮ್ಮ ನಾಡಿನ ಭಾಷೆ ಕನ್ನಡ, ಅದು ಹೃದಯದ ಭಾಷೆಯಾಗಬೇಕು” ಎಂದರು.

ದ್ವಿತೀಯ ಬಿಕಾಂ ವಿಧ್ಯಾರ್ಥಿನಿ ಎಸ್. ಪಿ ತೇಜಸ್ವಿ ಕನ್ನಡ ರಾಜ್ಯೋತ್ಸವ ದಿನದ ಮಹತ್ವವನ್ನು ಆಶಯ ನುಡಿಯ ಮೂಲಕ ಪ್ರಸ್ತುತ ಪಡಿಸಿದರು.

ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಮತ್ತು ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಶ್ರೀಮತಿ ರಾಜೇಶ್ವರಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಗಳದ ಪ್ರೊ. ಪ್ರಶಾಂತ್, ಪ್ರೊ. ಅರುಣ್ ಜಾನ್ಸನ್ ಬ್ರಾಂಕೊ, ರಕ್ಷಿತಾ ಎಸ್, ರೋವರ್ಸ್ ಲೀಡರ್ ಪ್ರೊ. ಶ್ರೀನಾಥ್ ಉಪಸ್ಥಿತರಿದ್ದರು.

ಸಿಂಥಿಯಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ರಾಜೇಶ್ವರಿ ಎಂ ಸ್ವಾಗತಿಸಿ, ಎನ್ ಎಸ್ ಎಸ್ ಯೋಜನಾಧಿಕಾರಿ ಉಪನ್ಯಾಸಕರಾದ ಪ್ರಶಾಂತ್ ಧನ್ಯವಾದವಿತ್ತರು.

Exit mobile version