ಉಜಿರೆ ಚರ್ಚಿನಲ್ಲಿ ಸಾಂಪ್ರದಾಯಿಕ ಸಕಲ ಮೃತರ ದಿನಾಚರಣೆ

0


ಉಜಿರೆ :ನ.2 ಜಾಗತಿಕ ವಾಗಿ ಕ್ರೈಸ್ತರು ತಮ್ಮ ಮೃತ ಪೂರ್ವಜರನ್ನು ಕುಟುಂಬಸ್ತರನ್ನು ಸ್ಮರಿಸಿ ಅವರಿಗಾಗಿ ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸುವ ದಿನ.
ಸಾಂಪ್ರದಾಯಿಕ ಈ ದಿನವನ್ನು ಉಜಿರೆ ಸಂತ ಅಂತೋಣಿ ಚರ್ಚ್ ಸೀಮೆಟ್ರಿ ಯ ,ಮೇಣದ ಬತ್ತಿಗಳಿಂದ ಹಾಗೂ ವಿವಿಧ ಬಗೆ ಯ ಹೂಗಳಿಂದ ಅಲಂಕ್ರತ ಗೊಂಡು ಕಂಗೊಳಿಸು ತ್ತಿತ್ತು. ಚರ್ಚ್ ನ ಪ್ರಧಾನ ಧರ್ಮ ಗುರುಗಳಾದ ವಂ. ಫಾ. ಜೇಮ್ಸ್ ಡಿಸೋಜ ದಿವ್ಯ ಬಲಿ ಪೂಜೆ ಅರ್ಪಿಸಿ ನಂತರ ಧಾರ್ಮಿಕ ವಿಧಿ ವಿಧಾನಗಳ ನೇತೃತ್ವ ವಹಿಸಿ ಸತ್ಕಾರ್ಯ ಗಳ ಮುಖಾಂತರ ದೇವರು ಮೆಚ್ಚು ವ ಕೆಲಸವನ್ನು ಮಾಡಿ ಆತ್ಮವನ್ನು ಚಿರಾಯು ಗೊಳಿಸುವಂತೆ ಆಹ್ವಾನವಿತ್ತರು.

ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಫಾ. ವಿಜಯ್ ಲೋಬೊ ಸಹಾಯಕರಾಗಿದ್ದರು. ಈ ಸಂದರ್ಭದಲ್ಲಿ ಚರ್ಚ್ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here