ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ಬೆಳ್ತಂಗಡಿ: 67ನೇ ಕನ್ನಡ ರಾಜ್ಯೋತ್ಸವವನ್ನು ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ನ.2ರಂದು ವಿನೂತನವಾಗಿ ಆಚರಿಸಲಾಯಿತು.

ಕನ್ನಡದ ಬಾವುಟವನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ಚರ್ಚ್ ನ ಪ್ರಧಾನ ಸೇವಕ ಜೋಯೆಲ್ ಪ್ರೀತಮ್ ರೇಗೋರವರು ಎಲ್ಲಾ ಭಾಷೆಗಳನ್ನು ಪ್ರೀತಿಸಿ, ಮಾತೃಭಾಷೆ ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿ ಉಳಿಸಬೇಕೆಂದು ನುಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಮುಖ್ಯ ಅತಿಥಿಯವರನ್ನು ಪರಿಚಯಿಸಿ, ನಾವೆಲ್ಲರೂ ಕನ್ನಡ ಭಾಷಾಭಿಮಾನವನ್ನು ಬೆಳೆಸಿ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಉಳಿಸಬೇಕೆಂದು ನುಡಿದು ಶುಭಹಾರೈಸಿದರು. ಕನ್ನಡ ಸಂಘದ ವಿದ್ಯಾರ್ಥಿಗಳು
ಕನ್ನಡದ ಶ್ರೇಷ್ಠ ಕವಿಗಳ ಪರಿಚಯವನ್ನು ರೂಪಕದ ಮೂಲಕ ತಿಳಿಸಿದರು. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಸೊಬಗನ್ನು ಹಾಡು, ನೃತ್ಯಗಳ ಪ್ರದರ್ಶಿಸಿ ಎಲ್ಲರ ಮನತಣಿಸಿದರು.
ಕನ್ನಡ ರಾಜ್ಯೋತ್ಸವ ಮಹತ್ವ ಹಿನ್ನಲೆಯನ್ನು ಸಹಶಿಕ್ಷಕಿ ಶ್ರೀಮತಿ ಪಲ್ಲವಿಯವರು ತಿಳಿಸಿದರು. ವಿದ್ಯಾರ್ಥಿಗಳಾದ
ಸಹನಾ ಪರ್ವಿನ್ ಸ್ವಾಗತಿಸಿ, ಪ್ರಜ್ಞೇಶ್ ವಂದಿಸಿದರು. ಪ್ರತಿಭಾ ದೊಡಮನಿ ಹಾಗೂ ಅಲ್ಫಿಯಾ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಂಘದ ಶಿಕ್ಷಕಿಯರಾದ ಶ್ರೀಮತಿ ಪಲ್ಲವಿ, ಶ್ರೀಮತಿ ಪ್ರತಿಜ್ಞಾ ಹಾಗೂ ಕು. ರವೀನಾ ಸಹಕರಿಸಿದರು.

LEAVE A REPLY

Please enter your comment!
Please enter your name here