Site icon Suddi Belthangady

ನಾರಾಯಣಗುರು ಕೋಶ ನಿರ್ಮಾಣ ಮತ್ತು ಅನುದಾನ ನೀಡಿದ ಸರಕಾರ ಬ್ರಹ್ಮಾನಂದ ಶ್ರೀ ರವರಿಂದ ಸ್ವಾಗತ 

ಧರ್ಮಸ್ಥಳ :ಬ್ರಹ್ಮ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಕೋಶವನ್ನು ನಿರ್ಮಾಣ ಮಾಡಿ ಅದಕ್ಕೆ ಬೇಕಾದ ಅನುದಾನವನ್ನು ಒದಗಿಸಿದ ಕ್ರಮವನ್ನು ಧರ್ಮಸ್ಥಳ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರು ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸ್ವಾಗತಿಸಿ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಈಡಿಗ, ಬಿಲ್ಲವ, ನಾಮಧಾರಿಗಳು ಸೇರಿದಂತೆ 26 ಉಪ ಪಂಗಡಗಳನ್ನು ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ಮಾಡಲು ಈ ಸಮಾಜದ ಆರ್ಥಿಕ, ಶೈಕ್ಷಣಿಕ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಒಂದು ದೃಢ ನಿರ್ಧಾರವನ್ನು ಮಾಡಿ ಸರಕಾರಿ ಆದೇಶವನ್ನು ಮಾಡಿರುವುದು ನಮಗೆಲ್ಲಾ ಸಂತೋಷದ ವಿಚಾರವಾಗಿರುತ್ತದೆ. ಈ ವಿಚಾರದಲ್ಲಿ ಸರಕಾರಕ್ಕೆ ಮಾರ್ಗದರ್ಶನ ಮಾಡಿದ ಈ ಜಿಲ್ಲೆಯ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್  ಕುಮಾರ್ ರವರಿಗೆ ಹಾಗೂ ಇಂಧನ ಇಲಾಖೆ  ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್‌ ಕುಮಾರ್‌ರವರಿಗೆ ಹಾಗೂ ಹಿಂದುಳಿದ ವರ್ಗದ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಹಾಗೂ ಬಂದರು, ಮೀನುಗಾರಿಕಾ ಸಚಿವರಾದ ಎಸ್.  ಅಂಗಾರ ರವರಿಗೆ, ಸಂಬಂಧ ಪಟ್ಟ ಎಲ್ಲಾ ಶಾಸಕರಿಗೆ ಹಾಗೂ ಈ ವಿಚಾರದಲ್ಲಿ ಸದಾ ಸರಕಾರದ ಗಮನ ಸೆಳೆದ  ಸ್ವಾಮೀಜಿಗಳಿಗೆ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ವತಿಯಿಂದ ಸದ್ಗುರು ಶ್ರೀಶ್ರೀಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Exit mobile version