Site icon Suddi Belthangady

ಮಚ್ಚಿನ: ಭಾಗ್ಯಶ್ರೀ ಮಿತ್ರ ಮಂಡಳಿ ನೆತ್ತರ ಶಾಲಾ ಅಭಿವೃದ್ಧಿ ಸಮಿತಿ ನೆತ್ತರ ಇದರ ಜಂಟಿ ಆಶ್ರಯದಲ್ಲಿ ದೀಪಾವಳಿಯ ಪ್ರಯುಕ್ತ ಕ್ರೀಡೋತ್ಸವ

ಮಚ್ಚಿನ: ಭಾಗ್ಯಶ್ರೀ ಮಿತ್ರ ಮಂಡಳಿ ನೆತ್ತರ ಶಾಲಾ ಅಭಿವೃದ್ಧಿ ಸಮಿತಿ ನೆತ್ತರ ಇದರ ಜಂಟಿ ಆಶ್ರಯದಲ್ಲಿ ದೀಪಾವಳಿಯ ಪ್ರಯುಕ್ತ ಕ್ರೀಡೋತ್ಸವವು  ಅ.23ರಂದು  ಕಿರಿಯ ಪ್ರಾಥಮಿಕ ಶಾಲೆ ನೆತ್ತರದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಡಂತ್ಯಾರ್  ಮಾಜಿ ತಾಲೂಕು ಪಂಚಾಯತ್ ಸದಸ್ಯರು ವಸಂತಿ ಲಕ್ಷ್ಮಣ್  ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಮಚ್ಚಿನ ಗ್ರಾಮ ಪಂಚಾಯತಿ ಸದಸ್ಯರಾದ ಚಂದ್ರಶೇಖರ್ ಬಿ ಎಸ್ ಅಧ್ಯಕ್ಷ ಸ್ಥಾನ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಸದಸ್ಯರಾದ ರುಕ್ಮಿಣಿ , ಶಾಲಾ ಮುಖ್ಯೋಪಾಧ್ಯಾಯರದ ಸೀತಾರಾಮ್,ರಾಧಾಕೃಷ್ಣ ಶೆಟ್ಟಿ ನೆತ್ತರ ,ಎಸ್‌ಡಿಎಂ ಅಧ್ಯಕ್ಷರಾದ ನವೀನ್ ಕೋಡಿ ,ವಾಸು ಬಂಗೇರ, ಕೃಷ್ಣಪ್ಪ ಪೂಜಾರಿ,  ಮಡಂತ್ಯಾರ್ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಸತೀಶ್ ಮರಕಡ ಇವರು ಉಪಸಿತರಿದ್ದರು.

ನಂತರ ಸ್ಥಳೀಯರಿಗೆ ಅಂಗನವಾಡಿ ಮಕ್ಕಳಿಗೆ ಆಟೋಟ ಸ್ಪರ್ಧೆ ಹಾಗೂ ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆಯಿತು.

ಸಮಾರಂಭದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಶಾಸಕರಾದ ಹರೀಶ್ ಪೂಂಜಾ ಇವರು ಮಾತನಾಡಿ ನೆತ್ತರ ರಸ್ತೆ ಹಾಗೂ ಶಾಲೆಯ ಅಭಿವೃದ್ಧಿಗೆ ನಾನು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಭಾಗ್ಯಶ್ರೀ ಮಿತ್ರ ಮಂಡಳಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ವತಿಯಿಂದ ದೀಪಾವಳಿಯ ಪ್ರಯುಕ್ತ ಶಾಸಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಾಜೆ,  ಗ್ರಾಮ ಪಂಚಾಯತ್ ಸದಸ್ಯರಾದ ಪ್ರಮೋದ್ ಕುಮಾರ್,  ಮಡಂತ್ಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಕಿಶೋರ್ ಶೆಟ್ಟಿ ಮೂಡಯೂರು, ತಣ್ಣೀರ್ ಪಂಥ ಗ್ರಾಮ ಪಂಚಾಯತ್ ಸದಸ್ಯರಾದ ರುಕೇಶ್ ಮುಂದಿನ ,ನವೀನ್ ಊರ್ಲ ಬೆಟ್ಟು, ಹೈದರ್ ಎಮ್ ಆರ್ ಸುಪಾರಿ ಮಡಂತ್ಯಾರ್, ಅಶೋಕ್ ಗುಂಡಿ ಯಾಲ್ಕೆ ನವೀನ್ ಕೊಡ್ಲಕ್ಕೆ ಅಂಗನವಾಡಿ ಕಾರ್ಯಕರ್ತೆ ಗೀತಲತಾ, ಮೋನಪ್ಪ ಪೂಜಾರಿ, ಭಾಗ್ಯಶ್ರೀ ಮಿತ್ರ ಮಂಡಳಿಯ ಅಧ್ಯಕ್ಷರಾದ ಚಂದ್ರ ಪೂಜಾರಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನವೀನ್ ಕೋಡಿ ಸ್ಥಾಪಕ ಅಧ್ಯಕ್ಷರಾದ ಕೃಷ್ಣಪ್ಪ ಸಾಲ್ಯಾನ್ ಕಾರ್ಯದರ್ಶಿಯಾದ ಹರೀಶ್ ಕುಮಾರ್ ಕೋಡಿ ಇವರು ಉಪಸಿದ್ಧರಿದ್ದರು ಕ್ರೀಡಾಕೂಟದಲ್ಲಿ ವಿಜೇತರಿಗೆ ಶಾಸಕರು ಬಹುಮಾನ ವಿತರಿಸಿದರು ಶಾಲೆಯ ನೂತನ ರಂಗಮಂದಿರ ನಿರ್ಮಾಣಕ್ಕೆ ಭಾಗ್ಯಶ್ರೀ ಮಿತ್ರ ಮಂಡಳಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಯ ವತಿಯಿಂದ ಮಹಾಬಲ ದೇವಾಡಿಗ ನೆತ್ತರ ಇವರು ಶಾಸಕರಿಗೆ ಮನವಿ ನೀಡಿದರು ಸದಾಶಿವ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು ಮಹಾಬಲ ದೇವಾಡಿಗ ಸ್ವಾಗತಿಸಿ ಹೇಮಂತ್ ಶೆಟ್ಟಿ ನೆತ್ತರ ಧನ್ಯವಾದ ಕೋರಿದರು.

Exit mobile version