Site icon Suddi Belthangady

ಬಳಂಜ ವಾಲಿಬಾಲ್ ಕ್ಲಬ್ ನ ಮಹಾಸಭೆ

ಬಳಂಜ: ಬಳಂಜ ವಾಲಿಬಾಲ್ ಕ್ಲಬ್ ನ 2021-22 ನೇ ಸಾಲಿನ ವಾರ್ಷಿಕ ಮಹಾಸಭೆಯು ಅ.23 ರಂದು ಶ್ರೀ ದೈವ ಕೊಡಮಣಿತ್ತಾಯ ಆವರಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಬಳಂಜ ವಾಲಿಬಾಲ್ ಕ್ಲಬ್ ಅಧ್ಯಕ್ಷ ರಾಕೇಶ್ ಹೆಗ್ಡೆ ವಹಿಸಿದ್ದರು. ಕ್ಲಬ್ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ವಾರ್ಷಿಕ ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು.

ವೇದಿಕೆಯಲ್ಲಿ ಕೋಟ್ಯಾನ್ ರಾಕರ್ಸ್ ತಂಡದ ಮಾಲಕ ಸಂತೋಷ್ ಪಿ ಕೋಟ್ಯಾನ್ ಬಳಂಜ, ಮಜ್ಜೇನಿಬೈಲು ಬ್ರದರ್ಸ್ ತಂಡದ ಮಾಲಕ ವಿಶ್ವನಾಥ ಹೊಳ್ಳ,ನೂತನ ತಂಡದ ಮಾಲಕ ಸಂತೋಷ್ ಕುಮಾರ್ ಕಾಪಿನಡ್ಕ, ಧೀಮಿಸೋಲೆ ತಂಡದ ವ್ಯವಸ್ಥಾಪಕ ಯಶೋಧರ ಶೆಟ್ಟಿ, ಸುವರ್ಣ ಸ್ಟ್ರೈಕರ್ ತಂಡದ ಮಾಲಕ ಅಶ್ವಥ್ ಹೆಚ್.ಡಿ, ಕ್ಲಬ್ ಕಾರ್ಯದರ್ಶಿ ಯೋಗೀಶ್ ಆರ್, ಕ್ಲಬ್ ಪದಾಧಿಕಾರಿಗಳಾದ ಪುರಂದರ ಪೂಜಾರಿ ಪೆರಾಜೆ, ಯೋಗೀಶ್ ಕೊಂಗುಳ,ಕಿಶಾನ್ ಬಳಂಜ,ಲತೇಶ್ ಪೆರಾಜೆ, ಹಿರಿಯ ವಾಲಿಬಾಲ್ ಆಟಗಾರ ಸುರೇಶ್ ಹೇವ ಹಾಗೂ ಬಳಂಜ ವಾಲಿಬಾಲ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

Exit mobile version