Site icon Suddi Belthangady

ಶಿರ್ಲಾಲಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ

ಶಿರ್ಲಾಲ್ : ‘ಸಂಘಟನೆ ಇಲ್ಲದ ಸಮಾಜದಲ್ಲಿ ಹೆಚ್ಚು ಸಮಯ ಬದುಕಿರಲು ಸಾಧ್ಯವಿಲ್ಲ. 26 ಬೇರೆ ಬೇರೆ ಹೆಸರಿನಲ್ಲಿ ಹರಡಿರುವ ಬಿಲ್ಲವ ಸಮಾಜ ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯಲ್ಲಿದ್ದು ಸಮಾಜ ಬಾಂಧವರು ಒಗ್ಗಟ್ಟಾಗಿ ನಮ್ಮ ಹಕ್ಕಿನ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಕೇಳಬೇಕಾಗಿದೆ’ ಎಂದು ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.

ಅವರು ಅ.23 ರಂದು ಬ್ರಹ್ಮ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ(ರಿ), ಯುವ ಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ವೇದಿಕೆ, ಯುವವಾಹಿನಿ ಸಂಚಲನ ಸಮಿತಿ ಶಿರ್ಲಾಲು – ಕರಂಬಾರು ಇದರ ಆಶ್ರಯದಲ್ಲಿ ಕಟ್ರಬೈಲು ಆನಂದ ಪೂಜಾರಿಯವರ ಗದ್ದೆಯಲ್ಲಿ ನಡೆದ ಬಿಲ್ಲವ ಸಮಾಜ ಬಾಂಧವರ ಕೇಸರ್ ದ ಗೊಬ್ಬು ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ನಾರಾಯಣ ಗುರುಗಳ ಸ್ಥಬ್ಧ ಚಿತ್ರಕ್ಕೆ ಅವಕಾಶ ಸಿಗಲಿಲ್ಲ. ಪಠ್ಯಪುಸ್ತಕದಲ್ಲಿ ನಾರಾಯಣ ಗುರುಗಳ ಪಠ್ಯ ತೆಗೆಯುವ ಕಾರ್ಯವಾಗಿತ್ತು ಎಂದಾದರೆ ಅದಕ್ಕೆ ಕಾರಣ ಸಮಾಜದಲ್ಲಿ ಒಗ್ಗಟ್ಟಿನ ಕೊರತೆಯೇ ಆಗಿದೆ. ಸಮಾಜ ಸಂಘಟಿತರಾಗಬೇಕು ಎಂಬ ಕಾರಣಕ್ಕೆ ಜನವರಿ ತಿಂಗಳಲ್ಲಿ ಮಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡುವ ಉದ್ದೇಶವಿದೆ ಎಂದರು.

ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಮಾತನಾಡಿ, ‘ ತುಳುನಾಡು ಹಲವು ಸಂಪ್ರದಾಯಗಳಿಗೆ ಪ್ರಸಿದ್ಧವಾದುದು. ಇಲ್ಲಿಯ ಪ್ರತಿಯೊಂದು ವಿಚಾರಗಳು ವಿಶ್ವ ಮಾನ್ಯತೆ ಗಳಿಸುತ್ತಿವೆ. ಯುವಕರ ಉತ್ಸಾಹ ಮತ್ತು ಭಾಗವಹಿಸುವ ರೀತಿ ಗಮನಿಸಿಕೊಂಡಾಗ ಮುಂದಿನ ದಿನಗಳಲ್ಲಿ ಕೆಸರುಗದ್ದೆ ಕ್ರೀಡಾಕೂಟ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾದರೆ ಅತಿಶಯೋಕ್ತಿಯಲ್ಲ’ ಎಂದರು.

ಕ್ರೀಡಾಕೂಟವನ್ನು ಚರಣ್ ಕೆ. ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಶಿರ್ಲಾಲು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಕೋಟ್ಯಾನ್ ವಹಿಸಿದ್ದರು.

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಜಯ ವಿಕ್ರಮ್ ಕಲ್ಲಾಪು, ಜೊತೆ ಕಾರ್ಯದರ್ಶಿ ರಾಜೀವ ಸಾಲಿಯಾನ್, ನಿರ್ದೇಶಕರಾದ ರಂಜಿತ್ ಹೆಚ್.ಡಿ., ಗುರು ಪ್ರಸಾದ್ ಕೋಟ್ಯಾನ್, ರಮೇಶ್ ಪೂಜಾರಿ ಪಡ್ಡಾಯಿಮಜಲು, ಅಳದಂಗಡಿ ವಲಯ ಅಧ್ಯಕ್ಷ ಸಂಜೀವ ಪೂಜಾರಿ ಕೊಡಂಗೆ, ಕುತ್ಲೂರು ಸಂಘದ ಅಧ್ಯಕ್ಷ ನಿತ್ಯಾನಂದ ಪೂಜಾರಿ ಕುತ್ಲೂರು, ಬಳಂಜ ಸಂಘದ ಅಧ್ಯಕ್ಷ ಪ್ರವೀಣ ಕುಮಾರ್ ಹೆಚ್.ಎಸ್., ವೇಣೂರು ಸಂಘದ ಅಧ್ಯಕ್ಷ ಹರೀಶ್ ಪೊಕ್ಕಿ, ಸುಲ್ಕೆರಿಮೊಗ್ರು ಸಂಘದ ಅಧ್ಯಕ್ಷ ಸಂಕೇತ್ ಬಂಗೇರ, ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷೆ ಸುಜಾತ ಅಣ್ಣಿ ಪೂಜಾರಿ, ಪೂರ್ವಾಧ್ಯಕ್ಷರಾದ ಹರೀಶ್ ಸುವರ್ಣ ಕನ್ಯಾಡಿ, ಪ್ರಸಾದ್ ಎಂ.ಕೆ. ನಿಯೋಜಿತ ಅಧ್ಯಕ್ಷ ಅಶ್ವತ್ ಕುಮಾರ್, ಹಿಂದೂ ಯುವಶಕ್ತಿ ಆಲಡ್ಕ ಇದರ ಅಧ್ಯಕ್ಷ ದೇವದಾಸ್ ಸಾಲಿಯಾನ್, ಶಿರ್ಲಾಲ್ ಸಿ. ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಣ್ಣಾಜಿ ಕೊಟ್ಯಾನ್, ತಾಲ್ಲೂಕು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಹೆಚ್.ಗ್ರಾಮ ಪಂಚಾಯಿತಿ ಸದಸ್ಯರಾದ ಸೋಮನಾಥ ಬಂಗೇರ, ಜ್ಯೋತಿ, ಉದ್ಯಮಿ ನಿತೀಶ್ ಗುಂಡೂರಿ, ಯುವವಾಹಿನಿ ಕೇಂದ್ರ ಸಮಿತಿ ನಿರ್ದೇಶಕ ನವೀನ್ ಪಚ್ಚೇರಿ, ಸುಧಾಮಣಿ ರಮಾನಂದ್, ರಾಜು ಪೂಜಾರಿ ಕಲ್ಲಾಜೆ, ಧರ್ಣಪ್ಪ ಪೂಜಾರಿ ಮಡೆಮಾರು, ಪುನೀತ್ ಕುಮಾರ್, ಆನಂದ ಪೂಜಾರಿ ಕಟ್ರಬೈಲು ಮೊದಲದವರು
ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕರಾಟೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಜಿತೇಶ್ ರಾಧಾಕೃಷ್ಣ ಬಾನೊಟ್ಟು, ಕಬಡ್ಡಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ದೀಪ್ತಿ ಬಾಕ್ಯಾರ್, ಕರಣ್ ನೆತ್ರಬೈಲು ಇವರನ್ನು ಸನ್ಮಾನಿಸಲಾಯಿತು.

ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಹರೀಶ್ ಕಲ್ಲಾಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು .

ಮಹಿಳಾ ಬಿಲ್ಲವ ವೇದಿಕೆ, ಯುವ ಬಿಲ್ಲವ ವೇದಿಕೆ, ಯುವವಾಹಿನಿ ಸಂಚಲನಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.
ಮಕ್ಕಳು , ಮಹಿಳೆಯರು ಮತ್ತು ಪುರುಷರಿಗೆ ವಾಲಿಬಾಲ್, ಕಬಡ್ಡಿ, ಹಗ್ಗ ಜಗ್ಗಾಟ, 100 ಮೀ ಓಟ, 5 ಕಾಲಿನ ಓಟ, ರಿಲೇ, ತ್ರೋಬಾಲ್, ಉಪ್ಪಿನ ಮೂಟೆ ಓಟ, ಕಪ್ಪೆ ಓಟ, ಹಿಂದೆ ಓಟ, ಅಪ್ಪಂಗಾಯ, ಹಾಳೆ ಓಟ ಮುಂತಾದ ಸ್ಪರ್ಧೆಗಳು ನಡೆದವು.

Exit mobile version