Site icon Suddi Belthangady

ಯೋಗಸಾನ ಸ್ಪರ್ಧೆಯಲ್ಲಿ ಕಲ್ಮಂಜ ಸ. ಪ್ರೌಢ ಶಾಲಾ ವಿದ್ಯಾರ್ಥಿನಿ ಐಶ್ವರ್ಯ ರಾಜ್ಯಮಟ್ಟಕ್ಕೆ

 

ಕಲ್ಮಂಜ: ಕಾರ್ಕಳದ ಮಿಯಾರು ಮೊರಾರ್ಜಿ ಶಾಲೆಯಲ್ಲಿ ನಡೆದ ವಿಭಾಗ ಮಟ್ಟದ ಯೋಗಸಾನ ಸ್ಪರ್ಧೆಯಲ್ಲಿ ಕಲ್ಮಂಜ ಸರಕಾರಿ ಪ್ರೌಢ ಶಾಲಾ 9ನೇ ತರಗತಿಯ  ವಿದ್ಯಾರ್ಥಿನಿ ಐಶ್ವರ್ಯ ಚತುರ್ಥು ಸ್ಥಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಬೆಳ್ತಂಗಡಿ ಜೂನಿಯರ್  ಕಾಲೇಜಿನ ಸುವರ್ಣ ಸಂಭ್ರಮದ ಅಂಗವಾಗಿ ನಡೆದ ಯೋಗ ದಿನಾಚರಣೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ, ಬಂಟ್ವಾಳದ ದಡ್ಡಲಿಕಾಡು ಪ್ರೌಢ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದರು.

ಮೂಡಬಿದ್ರೆ ಶಾರದೋತ್ಸವ ಪ್ರಯುಕ್ತ ನಡೆದ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ದಸರಾ ಪ್ರಯುಕ್ತ ಯೋಗ ಆವಿಷ್ಕಾರದಿಂದ ದ.ಕ , ಉಡುಪಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಇವರು ಕಲ್ಮಂಜ ಗ್ರಾಮದ ಅಕ್ಷಯ ನಗರ  ಬಟ್ಟಾಜೆ ಮನೆ ಮೋನಪ್ಪ ಮತ್ತು ಮಮಿತಾ ದಂಪತಿ ಪುತ್ರಿ.

ಆಂಗ್ಲ ಭಾಷಾ ಶಿಕ್ಷಕಿ ಪ್ರೇಮಲತಾ ತರಬೇತಿ ನೀಡಿರುತ್ತಾರೆ.

Exit mobile version