Site icon Suddi Belthangady

ಕೊಯ್ಯೂರು: ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಎಫ್ ಟಿಕೆ ತರಬೇತಿ

ಕೊಯ್ಯೂರು: ಗ್ರಾಮೀಣ ಕುಡಿಯುವ ನೀರು ಮತ್ತು ನ್ಯೆರ್ಮಲ್ಯ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಅನುಸ್ಥಾನ ಬೆಂಬಲ ಸಂಸ್ಥೆ ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಯ್ಯುರು ಗ್ರಾಮ ಪಂಚಾಯತಿನಲ್ಲಿ ಎಫ್ ಟಿಕೆ ತರಬೇತಿಯು ಅ.15ರಂದು ನಡೆಯಿತು.

ಈ ತರಬೇತಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ, ಉಪಾಧ್ಯಕ್ಷೆ ಸುಮಿತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಪ್ರಕಾಶ್ ಹಾಗೂ ಕುಡಿಯುವ ನೀರು ಮತ್ತು ನ್ಯೆರ್ಮಲ್ಯ ಸಮಿತಿ ಸದಸ್ಯರೆಲ್ಲರು, ನೀರುಗಂಟಿಗಳು ಸೇರಿ ಒಟ್ಟು 17 ಮಂಧಿ ಭಾಗವಹಿದರು.

ಅನುಸ್ಥಾನ ಬೆಂಬಲ ಸಂಸ್ಥೆಯ ಸಿಬ್ಬಂದಿ ಪುಷ್ಪಲತಾರವರು ಜಲಜೀವನ್ ಮಿಷನ್ ಕುರಿತು ಮಾಹಿತಿ ನೀಡಿರುವುದರೊಂದಿಗೆ ಕುಡಿಯುವ ನೀರಿನ ಗುಣಮಟ್ಟದ ಪರೀಕ್ಷೆಯ ಕುರಿತು ತರಬೇತಿಯನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Exit mobile version