Site icon Suddi Belthangady

ಬೆಳ್ತಂಗಡಿ: ಗ್ರಾ.ಪಂ ಜನಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸಿದ ವಿರುದ್ದ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಬೆಳ್ತಂಗಡಿ: ಬ್ಲಾಕ್ ಕಾಂಗ್ರೆಸ್ ಸಮಿತಿ ಬೆಳ್ತಂಗಡಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಘಟಕ ಬೆಳ್ತಂಗಡಿ ಇದರ ವತಿಯಿಂದ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಹಕ್ಕು ಮೊಟಕುಮಾಡಿ ವಿಕೇಂದ್ರಿಕರಣ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಕೇಂದ್ರಿಕರಣಗೊಳಿಸುತ್ತಿರುವ ಬಿಜೆಪಿ ಸರಕಾರದ ವಿರುದ್ದ ಪ್ರತಿಭಟನೆ ಅ.17ರಂದು ತಾ.ಪಂ ಕಚೇರಿ ಎದುರು ಪ್ರತಿಭಟನೆ  ನಡೆಯಿತು.

‌ಮಾಜಿ ಶಾಸಕರಾದ ಕೆ. ವಸಂತ ಬಂಗೇರ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಹಕ್ಕು ಮೊಟಕುಮಾಡಿ ವಿಕೇಂದ್ರಿಕರಣ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಕೇಂದ್ರಿಕರಣಗೊಳಿಸುತ್ತಿರುವ ಬಿಜೆಪಿ ಸರಕಾರದ ಕ್ರಮವನ್ನು ಖಂಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ವಸಂತ ಬಂಗೇರ,  ಮಾಜಿ ಸಚಿವ ಗಂಗಾಧರ ಗೌಡ,  ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾ ಘಟಕದ ಅಧ್ಯಕ್ಷರಾದ ಸಂತೋಷ್ ಕೊಳ್ನಾಡ್, ಬೆಳ್ತಂಗಡಿ  ರಾಜೀವ್ ಗಾಂಧಿ ಪಂಚಾಯತ್ ರಾಜ್ ಘಟಕದ ಅಧ್ಯಕ್ಷರಾದ ಪ್ರಶಾಂತ್ ವೇಗಸ್ ರಾಯ್. ಜೋಸೆಫ್ ಕೆಜೆ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಾದ ಕೆ. ಶೈಲೇಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ  ರಂಜನ್ ಜಿ ಗೌಡ , , ಪ್ರಮುಖರಾದ  ಅಭಿನಂದನ್ ಹರೀಶ್ ಕುಮಾರ್ ಜಯವಿಕ್ರಮ್,  ಮನೋಹರ್, ರಾಜಶೇಖರ್ ಶೆಟ್ಟಿ, ಪ್ರಶಾಂತ್ ವೇಗಸ್ , ರಾಯ್ ಜೋಸೆಫ್ ಕೆ.ಜೆ, ನಮಿತಾ ಪೂಜಾರಿ, ಪ್ರಶಾಂತ್ ವೇಗಸ್, ಅಶ್ರಫ್ ನೆರಿಯ, ನಗರ ಪಂಚಾಯತ್ ಡಿ ಜಗದೀಶ್, ಪ್ರಭಾಕರ ಹೆಗ್ಗಡೆ, ಸಂತೋಷ್ ವಳಂಬ್ರ, ನಾಮ್ ದೇವ ರಾವ್, ಅಬ್ದುಲ್ ರಹಿಮಾನ್ ಪಡ್ಪು, ಸಲೀಂ ಗುರುವಾಯನಕೆರೆ, ಮನೋಹರ ಇಳಂತಿಲ, ಪದ್ಮನಾಭ ಸಾಲ್ಯಾನ್ ಮಾಲಾಡಿ, ಗೋಪಿನಾಥ ನಾಯಕ್,  ಉಷಾ ಶರತ್, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡ್, ಮಹಮ್ಮದ್ ನೆರಿಯ, ಮಹಮ್ಮದ್ ರಫಿ, ಗಪೂರ್ ಸಾಹೇಬ್ ಮೊದಲಾದವರು ಅಲ್ಲದೆ ಹಾಲಿ‌, ಮಾಜಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸದಸ್ಯರು, ಹಾಲಿ, ಮಾಜಿ ನಗರ ಪಂಚಾಯತ್ ಸದಸ್ಯರು, ಹಾಲಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರುಗಳು ಮತ್ತು ಸರ್ವ ಸದಸ್ಯರುಗಳು ಮತ್ತು ಸ್ಪರ್ದಿಸಿದ ಅಭ್ಯರ್ಥಿಗಳು ಮಂಚೂಣಿ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಬ್ಲಾಕ್ ಕಾಂಗ್ರೆಸ್ ಪಧಾದಿಕಾರಿಗಳು, ವಲಯ ಅಧ್ಯಕ್ಷರುಗಳು, ಗ್ರಾಮ ಅಧ್ಯಕ್ಷರು,ಬೂತ್ ಅಧ್ಯಕ್ಷರುಗಳು ಮತ್ತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿ ದ್ದರು.

 

Exit mobile version