Site icon Suddi Belthangady

ಉಜಿರೆ ಎಸ್. ಡಿ.ಎಂ. ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದಿಂದ ಗಿರಿಜನ ಅಧ್ಯಯನ ಶಿಬಿರ


ಉಜಿರೆ : ಉಜಿರೆ ಎಸ್. ಡಿ. ಎಂ. ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ 4 ದಿನಗಳ ಕಾಲ ಗಿರಿಜನ ಅಧ್ಯಯನ ಶಿಬಿರವು ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟದಲ್ಲಿ ವಾಸಿಸುತ್ತಿರುವ ಸೋಲಿಗ ಸಮುದಾಯದಲ್ಲಿ, ಅ. 6 ರಿಂದ 10 ರವರೆಗೆ ಜರುಗಿತು.

ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಮುಖ್ಯವಾಗಿ ಗಿರಿಜನ ಜನಜೀವನದ ಅಧ್ಯಯನ, ಮನೆಭೇಟಿ, ಶ್ರಮದಾನ,ಔಷಧಿ ಸಸ್ಯಗಳ ತಿಳುವಳಿಕೆ, ಸಂಘ ಸಂಸ್ಥೆಗಳಿಗೆ ಭೇಟಿ, ಪರಿಚಯ, ಶಿಬಿರಾಗ್ನಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ವಿವೇಕಾನಂದ ಗಿರಿಜನ ಕಲ್ಯಾಣಕೇಂದ್ರ ಬಿ. ಆರ್. ಹಿಲ್ಸ್,ಅಟ್ರಿ ಸಂಸ್ಥೆ ಮುಂತಾದವರ ಸಹಯೋಗದಿಂದ ಈ ಶಿಬಿರವು ನಡೆದಿದ್ದು ವಿಭಾಗ ಮುಖ್ಯಸ್ಥ ಡಾ. ರವಿಶಂಕರ್ ಕೆ. ಆರ್ ಮತ್ತು ಶಿಬಿರ ಸಂಯೋಜಕ ಡಾ. ಧನೇಶ್ವರಿ ಆಯೋಜಿಸಿದ್ದು, ವಿ. ಜಿ. ಕೆ. ಕೆ. ಸಂಯೋಜಕ ಸುರೇಶ್ ಮತ್ತು ಅಟ್ರಿ ಸಂಸ್ಥೆಯ ಸಂಶೋಧನ ಅಧಿಕಾರಿ ಡಾ. ಮಾಹದೇವ್ ಗೌಡ ಉಪಸ್ಥಿತರಿದ್ದರು. ಈ ಶಿಬಿರವು ” ಸೋಲಿಗ ಜನಾಂಗ”ದ ಅಧ್ಯಯನಕ್ಕೆ ಬಹಳಷ್ಟು ಸಹಕಾರಿಯಾಗಿದೆ ಈ ಶಿಬಿರಕ್ಕೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ಯುವವಾಹಿನಿ ಕೇಂದ್ರಸ್ನಾತಕೋತ್ತರ ಸಮಾಜಕಾರ್ಯ ವಿಭಾಗ ಎಸ್. ಡಿ. ಎಂ. ಸ್ನಾತಕೋತ್ತರ ಕೇಂದ್ರ ಉಜಿರೆ ವಿಭಾಗದ ವತಿಯಿಂದ 4 ದಿನಗಳ ಕಾಲ ಗಿರಿಜನ ಅಧ್ಯಯನ ಶಿಬಿರವು ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟದಲ್ಲಿ ವಾಸಿಸುತ್ತಿರುವ ಸೋಲಿಗ ಸಮುದಾಯದಲ್ಲಿ ಅ.6 ರಿಂದ ಅ.10 ರವರೆಗೆ ಹಮ್ಮಿಕೊಳ್ಳಲಾಗಿತ್ತು.

ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಮುಖ್ಯವಾಗಿ ಗಿರಿಜನ ಜನಜೀವನದ ಅಧ್ಯಯನ, ಮನೆಭೇಟಿ, ಶ್ರಮದಾನ,ಔಷಧಿ ಸಸ್ಯಾಗಳ ತಿಳುವಳಿಕೆ, ಸಂಘಸಂಸ್ಥೆಗಳಿಗೆ ಭೇಟಿ, ಪರಿಚಯ, ಶಿಬಿರಾಗ್ನಿ ಮುಂತಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ವಿವೇಕಾನಂದ ಗಿರಿಜನ ಕಲ್ಯಾಣಕೇಂದ್ರ ಬಿ. ಆರ್. ಹಿಲ್ಸ್,ಅಟ್ರಿ ಸಂಸ್ಥೆ ಮುಂತಾದವರ ಸಹಯೋಗದಿಂದ ಈ ಶಿಬಿರವು ನೆರವೇರಿದ್ದು ಶಿಬಿರವನ್ನು ವಿಭಾಗ ಮುಖ್ಯಸ್ಥರಾದ ಡಾ. ರವಿಶಂಕರ್ ಕೆ. ಆರ್ ಮತ್ತು ಶಿಬಿರ ಸಂಯೋಜಕರಾದ ಡಾ. ಧನೇಶ್ವರಿಯವರು ಆಯೋಜಿಸಿದ್ದು, ವಿ. ಜಿ. ಕೆ. ಕೆ. ಸಂಯೋಜಕರಾದ ಶ್ರೀ ಸುರೇಶ್ ಮತ್ತು ಅಟ್ರಿ ಸಂಸ್ಥೆಯ ಸಂಶೋಧನ ಅಧಿಕಾರಿಯಾದ ಡಾ. ಮಾಹದೇವ್ ಗೌಡ ಅವರು ಉಪಸ್ಥಿತರಿದ್ದರು.

ಈ ಶಿಬಿರವು ” ಸೋಲಿಗ ಜನಾಂಗ”ದ ಅಧ್ಯಯನಕ್ಕೆ ಬಹಳಷ್ಟು ಸಹಕಾರಿಯಾಯಿತು.ಈ ಶಿಬಿರಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಯುವವಾಹಿನಿ ಕೇಂದ್ರ ಸಮಿತಿಯ ನಾಮ ನಿರ್ದೇಶಿತ ಸದಸ್ಯರು ಹಾಗೂ ಬಲಿಷ್ಠ ಬಿಲ್ಲವ ಸಂಘದ ಸನತ್ ಅಂಚನ್ ಹಾಗೂ ಸಂಪತ್ ಅಂಚನ್ ಇವರು ಸಹಾಯ ನೀಡಿ ಸಹಕರಿಸಿದರು.

Exit mobile version