ಸಾರಿಗೆ ವಾಹನಗಳಿಗೆ ಎಫ್.ಸಿ, ಸ್ಟಿಕ್ಕರ್ ಅಳವಡಿಕೆ ಯಥಾ ಸ್ಥಿತಿ ಮುಂದುವರಿಕೆ: ಗೊಂದಲಕ್ಕೆ ತೆರೆ ಎಳೆದ ಶಾಸಕ ಹರೀಶ್ ಪೂಂಜ

0

ಬೆಳ್ತಂಗಡಿ: ವಾಹನದ ಅರ್ಹತಾ ಪತ್ರ ನೀಡಿಕೆ ಹಾಗೂ ನವೀಕರಣ ಸಂದರ್ಭದಲ್ಲಿ ಕೇಂದ್ರ ಮೋಟಾರು ವಾಹನಗಳ ನಿಯಮದಂತೆ ಎಫ್.ಸಿ ಮತ್ತು ಸ್ಟಿಕ್ಕರ್ ಅಳವಡಿಕೆಗೆ ಈ ಹಿಂದಿನ ನಿಯಮವೇ ಮುಂದುವರಿಯಲಿದೆ ಎಂದು ಶಾಸಕ ಹರೀಶ್ ಪೂಂಜ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾರಿಗೆ ವಾಹನಗಳ ಎಫ್.ಸಿ ಮತ್ತು ಸ್ಟಿಕ್ಕರ್ ಅಳವಡಿಕೆ ನಿಯಮಕ್ಕೆ ಹಾಗೂ ಇದಕ್ಕೆ ವಿಧಿಸಿರುವ ಹೆಚ್ಚಿನ ಶುಲ್ಕ ವಿರೋಧಿಸಿ, ಅ.12ರಂದು ಬೆಳ್ತಂಗಡಿ, ಎ.ಪಿ.ಎಂ.ಸಿ ಆವರಣದಲ್ಲಿ ಪಿಕಪ್ ಮತ್ತು ಟೆಂಪೊ ಚಾಲಕ ಮಾಲಕರು ಪ್ರತಿಭಟನೆ ನಡೆಸಿದರು. ಈ ಬಗ್ಗೆ ಮಾಹಿತಿ ಪಡೆದ ಶಾಸಕರಾದ ಹರೀಶ್ ಪೂಂಜರವರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ, ಮಾತುಕತೆ ನಡೆಸಿದರು.
ಸರಕಾರದಿಂದ ಜಾರಿಯಾದ ಆದೇಶದ ಬಗ್ಗೆ ಟೆಂಪೊ ಮತ್ತು ಪಿಕಪ್ ವಾಹನ ಚಾಲಕರಿಗೆ ಮತ್ತು ಮಾಲಕರಿಗೆ ಮಾಹಿತಿ ನೀಡಿದ ಬಳಿಕ ದರ ನಿಗದಿಪಡಿಸಬೇಕು. ಅಲ್ಲಿಯವರೆಗೆ ಯಥಾ ಸ್ಥಿತಿಯನ್ನು ಕಾಪಾಡಬೇಕೆಂದು ಮನವಿ ಮಾಡಿಕೊಂಡರು. ಶಾಸಕರ ಮನವಿ ಮೇರೆಗೆ ಸಾರಿಗೆ ಇಲಾಖೆಯ ಮೇಲಾಧಿಕಾರಿಗಳು ಸ್ಥಳೀಯ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಅದರಂತೆ ಯಥಾಸ್ಥಿತಿ ಕಾಯ್ದುಕೊಂಡಿದ್ದಾರೆ. ಇನ್ನು ಮುಂದೆ ಟೆಂಬೊ ಮತ್ತು ಪಿಕಪ್ ಚಾಲಕ, ಮಾಲಕರಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗದಂತೆ ಮುಖ್ಯಮಂತ್ರಿಗಳನ್ನು ಮತ್ತು ಸಂಬಂಧಪಟ್ಟ ಇಲಾಖಾ ಸಚಿವರಲ್ಲಿ ಮನವಿ ಮಾಡಲಾಗುವುದೆಂದು ಶಾಸಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here