ವಾಹನಗಳ ಎಫ್ ಸಿ ಬಗ್ಗೆ ಗೊಂದಲ: ದರ ಏರಿಕೆಗೆ ವಾಹನ ಚಾಲಕರ ವಿರೋಧ: ಮಾಜಿ ಶಾಸಕ ವಸಂತ ಬಂಗೇರ ಸ್ಥಳಕ್ಕೆ ಭೇಟಿ

0

ಬೆಳ್ತಂಗಡಿ: ಘನವಾಹನ ಮತ್ತು ಲಘು ಪಿಕಪ್ ಮುಂತಾದ ವಾಹನಗಳ ಫಿಟ್ ನೆಸ್ ಸರ್ಟಿಫಿಕೆಟ್ ಗೆ ರೇಟ್ ಹೆಚ್ಚಿಸಿರುವ ಕುರಿತು ಬೆಳ್ತಂಗಡಿಯ ಎಪಿಎಂಸಿ ಮೈದಾನದಲ್ಲಿ ಗೊಂದಲ ಏರ್ಪಟ್ಟಿತ್ತು. ಪಿಕಪ್ ನವರು, ಗೂಡ್ಸ್ ಲಾರಿಯವರು ಬಂದು ನಿಂತಿದ್ದು ಎಫ್ ಸಿ ಗೆ 4 ಸಾವಿರ ಕಟ್ಟಬೇಕು, ಐದು ಸಾವಿರ ಕಟ್ಟಬೇಕೆಂಬ ಗೊಂದಲದಲ್ಲಿದ್ದರು. ಇದರ ಜೊತೆ ವಾಹನದ ಸುತ್ತ ಅಂಟಿಸಬೇಕಾದ ರಿಫ್ಲೆಕ್ಟರ್ ಸ್ಟಿಕ್ಕರ್ ಗಳ ಬೆಲೆಯಲ್ಲೂ ಗಣನೀಯ ಏರಿಕೆಯಾಗಿರುವುದರ ಕುರಿತು ಚರ್ಚೆಗಳಾಗುತ್ತಲೇ ಇತ್ತು.

ಮಾಜಿ ಶಾಸಕ ವಸಂತ ಬಂಗೇರರ ಆಗಮನ: 

ಲಾರಿ ಮಾಲಕ,ಚಾಲಕರ ಪರ ನಿಂತ ಬಂಗೇರ ಇದೇ ವೇಳೆ ಲಾರಿಯವರು ಬಂದು ಕೇಳಿಕೊಂಡ ಹಿನ್ನಲೆಯಲ್ಲಿ ಎಪಿಎಂಸಿಯ ಮೈದಾನಕ್ಕೆ ಮಾಜಿ ಶಾಸಕ ವಸಂತ ಬಂಗೇರರು ಆಗಮಿಸಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದೇ ವೇಳೆ ಕೊರೊನಾದ ಕಾಲದಲ್ಲಿ ಈ ಬಾಡಿಗೆ ದಾರರು ತೊಂದರೆ ಅನುಭವಿಸಿದ್ದಾರೆ, ಅವರಿಗೆ ಮೊದಲಿನ ದರವನ್ನೇ ನಿಗದಿಪಡಿಸಬೇಕೆಂದು ಆಗ್ರಹಿಸಿದರು. ಮೇಲಾಧಿಕಾರಿಗಳಿಂದ ಹಳೆ ರೇಟ್ ಪಡೆಯಲು ನಿರ್ಧಾರ
ಬೆಳ್ತಂಗಡಿಯ ಎಪಿಎಂಸಿ ಮೈದಾನದಲ್ಲಿ ಗೊಂದಲ ಮುಂದುವರೆದಿರುವಾಗಲೇ ತಾಲೂಕಿನ ಸಾರಿಗೆ ಅಧಿಕಾರಿ ಈ ಹಿಂದೆ ಇದ್ದ ಎಫ್ ಸಿ ರೇಟ್ ನಂತೆ ಇವತ್ತು ಎಫ್ ಸಿ ಮಾಡಿಕೊಡಲು ಮೇಲಾದಿಕಾರಿಗಳು ತಿಳಿಸಿರುವುದಾಗಿ ಮಾಜಿ ಶಾಸಕರಿಗೆ ತಿಳಿಸಿದರು. ಈ ಮಾಹಿತಿಯನ್ನು ಮಾಜಿ ಶಾಸಕ ಸುದ್ದಿಯೊಂದಿಗೆ ಹಂಚಿಕೊಂಡರು.

ಏನೇ ಆದರು ಸರ್ಕಾರದ ಆದೇಶದಂತೆ ರೇಟ್ ಫಿಕ್ಸ್ ಮಾಡಲಾಗಿದೆ ಅನ್ನುವ ಸಾರಿಗೆ ಇಲಾಖೆ ಸಡನ್ ಆಗಿ ಹಳೆಯ ರೇಟ್ ಗೆ ಹಿಂತಿರುಗಲು ಸಾಧ್ಯವೇ. ಹಾಗಾದ್ರೆ ಪ್ರತಿಭಟನೆ,ವಿರೋಧ ಮಾಡದೇ ಚಾಲಕರು ಸುಮ್ಮನಿರುತ್ತಿದ್ದರೆ ಅವರಿಂದ ಸುಲಿಗೆ ಮಾಡಲಾಗುತ್ತಿತ್ತೇ ಅನ್ನುವುದು ಈಗ ಹುಟ್ಟಿಕೊಂಡ ಹೊಸ ಪ್ರಶ್ನೆಗಳಾಗಿವೆ.

LEAVE A REPLY

Please enter your comment!
Please enter your name here