ಸಾರಿಗೆ ವಾಹನಗಳಿಗೆ ರಿಟ್ರೆ ರಿಪ್ಲೆಕ್ಟಿವ್ ಟೇಪ್ ಹಾಗೂ ರಿಯರ್ ಮಾರ್ಕ್ ಪ್ಲೇಟ್ ಅಳವಡಿಕಾ ನಿಯಮಕ್ಕೆ ತಾತ್ಕಾಲಿಕ ವಿನಾಯಿತಿ: ಅದಾಲತ್‌ನಲ್ಲಾದ ಗೊಂದಲಕ್ಕೆ ತೆರೆ ಎಳೆದ ಶಾಸಕ ಹರೀಶ್‌ ಪೂಂಜ

0

ಬೆಳ್ತಂಗಡಿ: ಅ.12: ವಾಹನದ ಆರ್ಹತಾ ಪತ್ರ ನೀಡಿಕೆ ಹಾಗೂ ನವೀಕರಣ ಸಂದರ್ಭದಲ್ಲಿ ಕೇಂದ್ರ ಮೋಟಾರು ವಾಹನಗಳ ನಿಯಮ 104ರಡಿ ರಾಜ್ಯದ ಎಲ್ಲಾ ಸಾರಿಗೆ ವಾಹನಗಳಿಗೆ ರಿಟ್ರಿ ರಿಪ್ಲೆಕ್ಟಿವ್ ಟೇಪ್ ಮತ್ತು ರಿಯರ್ ಮಾರ್ಕ್ ಪ್ಲೇಟುಗಳಲ್ಲಿ ಅಳವಡಿಸುವ ನಿಯಮಕ್ಕೆ ಹಾಗೂ ಇದಕ್ಕೆ ವಿಧಿಸಿರುವ ಹೆಚ್ಚಿನ ಶುಲ್ಕದ ವಸೂಲಾತಿಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯ ಅದಾಲತ್‌ನಲ್ಲಿ ಗೊಂದಲವುಂಟಾಗಿ ಮಾಹಿತಿ ಪಡೆದು ಮಧ್ಯಪ್ರವೇಶಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಒಂದು ವಾರದ ಮಟ್ಟಿಗೆ ನಿಯಮಕ್ಕೆ ತಾತ್ಕಾಲಿಕ ಏನಾಯಿತಿ ದೊರೆಕಿಸಿ ಕೊಟ್ಟಿದ್ದಾರೆ.

ಈ ನಿಯಮಗಳ ಕುರಿತಾದ ಗೊಂದಲವನ್ನು ಮನಗಂಡ ಶಾಸಕರು ದೂರವಾಣಿ ಮೂಲಕ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ನಿಯಮಗಳು ಸಮರ್ಪಕವಾಗಿ ಇತರೆ ಎಲ್ಲಾ ಕಡೆಗಳಲ್ಲಿ ಜಾರಿಯಾದ ಬಳಿಕ ಅನುಷ್ಠಾನಗೊಳಿಸಿ ಎಂಬ ಸೂಚನೆಯನ್ನು ನೀಡಿದ್ದರು. ತಕ್ಷಣ ಸ್ಪಂದಿಸಿದ ಅಧಿಕಾರಿಗಳು ನಿಯಮಕ್ಕೆ ತಾತ್ಕಾಲಿಕ ವಿನಾಯಿತಿ ನೀಡಿದ್ದಾರೆಂದು ಶಾಸಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here