Site icon Suddi Belthangady

ಗ್ರಾಮ ಪಂಚಾಯಿತಿ ನೌಕರರಿಗೆ ಪದೋನ್ನತಿ : ಇಬ್ಬರು ಕಾರ್ಯದರ್ಶಿ ಮತ್ತು ಐದು ಮಂದಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಪದೋನ್ನತಿ

ಬೆಳ್ತಂಗಡಿ: ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ(ಗ್ರೇಡ್-2) ವೃಂದಕ್ಕೆ ಗ್ರಾಮ ಪಂಚಾಯತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಹ ಬಿಲ್ ಕಲೆಕ್ಟರ್ ಮತ್ತು ಗುಮಾಸ್ತ/ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ವೃಂದದಿಂದ ಸೇವೆಯೋಳಗಿನ ನೇಮಕಾತಿ ಮೂಲಕ ಅಂಡಿಂಜೆ ಗ್ರಾ.ಪಂ ನ ಬಿಲ್ ಕಲೆಕ್ಟರ್ ಚಂಪಾ ಇವರು ಅಂಡಿಂಜೆ ಗ್ರಾ.ಪಂ ಗೆ ಹಾಗೂ ಪುದುವೆಟ್ಟು ಗ್ರಾ.ಪಂ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಜನಾರ್ಧನ ಗೌಡ ಇವರು ಕಡಿರುದ್ಯಾವರ ಗ್ರಾ.ಪಂ ಗೆ ಕಾರ್ಯದರ್ಶಿಯಾಗಿ ಪದೋನ್ನತಿ ಗೊಂಡಿದ್ದಾರೆ.

ಗ್ರಾ.ಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದಕ್ಕೆ ಗ್ರಾ.ಪಂ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಹ ಬಿಲ್ ಕಲೆಕ್ಟರ್ ಮತ್ತು ಗುಮಾಸ್ತ/ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ವೃಂದದಿಂದ ಶಿಬಾಜೆ ಗ್ರಾ.ಪಂ ನಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಆಗಿದ್ದ ಕೆ.ಪಿ ಕೇಶವಗೌಡ ನಿಡ್ಲೆ ಗ್ರಾ.ಪಂ ಗೆ , ಶಿರ್ಲಾಲು ಗ್ರಾ.ಪಂ ನಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ಸುಪ್ರೀತಾ ಲಾಯಿಲ ಗ್ರಾ.ಪಂ ಗೆ, ನಿಡ್ಲೆ ಗ್ರಾ.ಪಂ ನಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಆಗಿದ್ದ ಸಂಜೀವ ಎಂ.ಕೆ ಚಾರ್ಮಾಡಿ ಗ್ರಾ.ಪಂ ಗೆ, ಬಾರ್ಯ ಗ್ರಾ.ಪಂ ನಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಆಗಿದ್ದ ಪ್ರಮೀಳಾ ಧರ್ಮಸ್ಥಳ ಗ್ರಾ.ಪಂ ಗೆ ಹಾಗೂ ಲಾಯಿಲ ಗ್ರಾ.ಪಂ ನಲ್ಲಿ ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜು ವೇಣೂರು ಗ್ರಾ.ಪಂ ಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕಾರಾಗಿ
ಪದನ್ನೋತಿಗೊಂಡಿದ್ದಾರೆ.

Exit mobile version