Site icon Suddi Belthangady

ಬೆಳ್ತಂಗಡಿ ಸಂಚಾರಿ ಠಾಣೆಗೆ ಎಎಸ್ ಐ ಆಗಿ ಹರಿಪ್ರಸಾದ್ ನೇಮಕ

ಬೆಳ್ತಂಗಡಿ: ದ.ಕ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಹೆಡ್ ಕಾನ್ಸ್ಟೇಬಲ್ ಆಗಿದ್ದ ಹರಿಪ್ರಸಾದ್ ಎಎಸ್ ಐ ಆಗಿ ಬಡ್ತಿ ಹೊಂದಿದ್ದು, ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಹರಿಪ್ರಸಾದ್ ಎಎ ಸ್ ಐ ಆಗಿ ಅಧಿಕಾರ ಸ್ವೀಕರಿಸಿದರು.

ಇವರು ಪುತ್ತೂರು ಗ್ರಾಮಾಂತರ, ಪುತ್ತೂರು ನಗರ, ಪಾಂಡೇಶ್ವರ, ಕಡಬ, ಉಪ್ಪಿನಂಗಡಿ, ಬಂಟ್ವಾಳ ಮುಂತಾದ ಪೊಲೀಸ್ ಠಾಣೆಯಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ ನಂತರ ಕಳೆದ ಐದು ವರ್ಷಗಳಿಂದ ದ.ಕ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದಲ್ಲಿ(ಎಸಿಬಿ) ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ಮಾಡಿ ಇದೀಗ ಎಎಸ್ಐ ಯಾಗಿ ಬಡ್ತಿ ಪಡೆದು ಬೆಳ್ತಂಗಡಿ ಸಂಚಾರಿ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಕಳೆದ 26 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಗಂಭೀರ ಅಪರಾಧ ಪ್ರಕರಣ ಹಾಗೂ ಎಸಿಬಿ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳನ್ನು ಕೆಡೆಮುರಿಕಟ್ಟಲು ಹಿರಿಯ ಅಧಿಕಾರಿಗಳಿಗೆ ಉತ್ತಮ ರೀತಿಯಲ್ಲಿ ನಿಷ್ಠೆಯಿಂದ ಸಹಾಯ ಮಾಡಿರುತ್ತಾರೆ.

ಇವರಿಗೆ ಎಪ್ರಿಲ್ 2 , 2022 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿದೆ. ಹರಿಪ್ರಸಾದ್ ಪುತ್ತುರು ತಾಲೂಕಿನ ಉಪ್ಪಿನಂಗಡಿಯ ನಟ್ಟಿಬೈಲು ನಿವಾಸಿಯಾಗಿದ್ದು ಅವರ ತಮದೆ ಕೆ ವೆಂಕಟಾಚಲ ನಿವೃತ್ತ ಅಬಕಾರಿ ಇಲಾಖೆಯಲ್ಲಿ ಹೆಡ್ ಗಾರ್ಡ್ ಆಗಿದ್ದರು. ತಂದೆ ವೆಂಕಟಾಚಲ ಮತ್ತು ತಾಯಿ ಕೆ ಕಸ್ತೂರಿ ದಂಪತಿ ಮೊದಲ ಮಗ ಹರಿಪ್ರಸಾದ್.

Exit mobile version