Site icon Suddi Belthangady

ರಕ್ತೇಶ್ವರಿಪದವು ನೇತಾಜಿ ಕ್ರೀಡಾ ಸಂಘದ ವತಿಯಿಂದ ಮಹಿಳೆಯರ-ಪುರುಷರ ಆಟೋಟ ಸ್ಪರ್ಧೆ


ನ್ಯಾಯತರ್ಪು : ರಕ್ತೇಶ್ವರಿಪದವು ನೇತಾಜಿ ಕ್ರೀಡಾ ಸಂಘದ ವತಿಯಿಂದ ಊರಿನ ಮಹಿಳೆಯರ – ಪುರುಷರು ಹಾಗೂ ಮಕ್ಕಳ ಆಟೋಟ ಸ್ಪರ್ಧೆ ಆ.6 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಜರುಗಿತು.

ನಿವೃತ ಜಿಸಿಓ ಭಾರತೀಯ ಭೂಸೇನೆ ದಿನೇಶ್ ಗೌಡ ದೀಪ ಪ್ರಜ್ವಲಿಸುವ ಮೂಲಕ ಕ್ರೀಡಾ ಕೂಟಕ್ಕೆ ಶುಭ ಹಾರೈಸಿದರು. ನೇತಾಜಿ ಕ್ರೀಡಾ ಸಂಘದ ಅಧ್ಯಕ್ಷ ಸಿದ್ದಪ್ಪ ಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ, ಉಪಾಧ್ಯಕ್ಷೆ ಕುಸುಮ ಎನ್.ಬಂಗೇರ, ಸದಸ್ಯರಾದ ಸುಧಾಕರ ಮಜಲು, ಮೋಹಿನಿ ಬೊಮ್ಮಣ್ಣ ಗೌಡ,ವಿಜಯ ಕುಮಾರ್ ಕೆ,ಸುದ್ದಿ ಪತ್ರಿಕೆ ವರದಿಗಾರ ಕೆ.ಎನ್.ಗೌಡ.ಕಲಾಯಿತೊಟ್ಟು, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಎಮ್,ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ಗೌಡ ಕೆ, ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಅಧ್ಯಕ್ಷ ರಂಜನ್ ಗೌಡ ಎಮ್,ನ್ಯಾಯತರ್ಪು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಸಂತ ಕುಮಾರ್,ರಕ್ತೇಶ್ವರಿಪದವು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಕವಿತಾ ರಾಜೀವ ಗೌಡ, ರಕ್ತೇಶ್ವರಿಪದವು ಅಂಗನವಾಡಿ   ಕಾರ್ಯಕರ್ತೆ  ನಾಗವೇಣಿ ಕೆ.ಎಸ್.ಆಶಾ ಕಾರ್ಯಕರ್ತೆ ಪೂರ್ಣಿಮಾ ವಿಜಯ ಕುಮಾರ್,ಕ್ರೀಡಾ ಸಂಘದ ಕಾರ್ಯದರ್ಶಿ ಶಶಿಕಲಾ, ರೂಪಾ ಕೆ, ಪ್ರಗತಿಪರ ಕೃಷಿಕ ವಿವೇಕ್ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿರಿಯರಾದ ಜಾರಪ್ಪ ಗೌಡ ಕೆ, ಧರ್ಣಪ್ಪ ಗೌಡ ಹೆಚ್,ಸೈನಿಕ ವಿಕ್ರಂ ಜೆ.ಎನ್,  ಸ್ಥಳೀಯ ಸಂಘ- ಸಂಸ್ಥೆಗಳ ಪದಾಧಿಕಾರಿಗಳಾದ, ವಸಂತ ಗೌಡ ಕೆ.ಕುಶಾಲಪ್ಪ ಗೌಡ ಕೆ,ಗಿರಿಯಪ್ಪ ಗೌಡ, ಕೆ ಗೋಪಾಲ ಗೌಡ ಎಮ್, ಆಶಾ ಕಾರ್ಯಕರ್ತೆ ಶಶಿಕಲಾ,ನಾಳ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯೆ ಭಾರತಿ ವಸಂತ ಕುಮಾರ್ ಭಜನಾ ಮಂಡಳಿ ಸದಸ್ಯರು, ಕ್ರೀಡಾಭಿಮಾನಿಗಳು ಭಾಗವಹಿಸಿದರು.

ಪ್ರಗತಿಪರ ಕೃಷಿಕ ಜನಾರ್ದನ ಪೂಜಾರಿ ಸ್ವಾಗತಿಸಿದರು. ನಾಳ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಉಮೇಶ್ ಕೇಲ್ದಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯನಿರ್ವಹಿಸಿ, ಧನ್ಯವಾದವಿತ್ತರು.

Exit mobile version