Site icon Suddi Belthangady

ಕೊಯ್ಯೂರು: ಭಜನಾ ಕಾರ್ಯಕ್ರಮ

ಕೊಯ್ಯೂರು‌ : ಕೊಯ್ಯೂರು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮತ್ತು ಸ.ಹಿ.ಪ್ರಾ.ಶಾಲೆ ಕೊಯ್ಯೂರು ದೇವಸ್ಥಾನ ಇದರ ಸಂಯುಕ್ತ ಆಶ್ರಯದಲ್ಲಿ ಸ.ಹಿ.ಪ್ರಾ.ಶಾಲೆ ಕೊಯ್ಯೂರು ದೇವಸ್ಥಾನದ ಹತ್ತಿರದ ಶಾಲೆಯಲ್ಲಿ ಅ.4 ರಂದು ಭಜನಾ ಕಾರ್ಯಕ್ರಮ ನಡೆಯಿತು.

ಮಹಾಪೂಜೆ  ಹಾಗೂ ಅನ್ನಸಂತರ್ಪಣೆ ನಡೆದು ನಂತರ ಕ್ರೀಡಾಕೂಟವನ್ನು ನಡೆಸಲಾಯಿತು.

ಕ್ರೀಡಾಕೂಟ ಉದ್ಘಾಟನೆಯನ್ನು  ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಮಾವಿನಕಟ್ಟೆ  ಉದ್ಘಾಟನೆ ನೆರವೇರಿಸಿದರು.

ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಧಾಕರ ದೇವಾಡಿಗ ಹಾಗೂ ಗ್ರಾ.ಪ.ಸದಸ್ಯೆ  ಶಾರದಾ ಕೊರಗಪ್ಪ ಮತ್ತು ಸಮಿತಿ ಕಾರ್ಯದರ್ಶಿ ಸದಾನಂದ ಗೌಡ ಉಪಸ್ಥಿತರಿದ್ದರು.

ಶಾಲಾ ಮಕ್ಕಳಿಗೆ ಹಾಗೂ ಊರವರಿಗೆ ವಿವಿಧ ಬಗೆಯ ಸ್ಪರ್ಧೆ ನಡೆಯಿತು. ನಂತರ ಸಮರೂಪ ಸಮಾರಂಭದ ಅಧ್ಯಕ್ಷತೆಯನ್ನು  ಚಂದ್ರಶೇಖರ ಮಾವಿನಕಟ್ಟೆ ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಡಾ ಕಾರ್ತಿಕ್. ಪಿ ಪಶುವೈದ್ಯಾಧಿಕಾರಿ ಪಶು ಚಿಕಿತ್ಸಾಲಯ ಬೆಂಜನಪದವು ಇವರು ಮಾತನಾಡಿ  ಶಾರದೋತ್ಸವದ ಆಚರಣೆಯ ವಿಧಾನ ಮತ್ತು ಮಹತ್ವದ ಬಗ್ಗೆ ಬಹಳ ಉತ್ತಮ ರೀತಿಯಲ್ಲಿ ವಿವರಿಸಿದರು ಹಾಗೂ ನಮ್ಮ ಗ್ರಾಮ ಹಾಗೂ ಹಳ್ಳಿಗಳಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್  .ಐಪಿಎಸ್    ತರಬೇತಿ ಪಡೆದು ಉತ್ತಮ ಅಧಿಕಾರಿಯಾಗಿ ಬರಬೇಕು ಎಂದು  ಎಂದು ಹೇಳಿ, ಈ ಕಾರ್ಯಕ್ರಮ ಮಕ್ಕಳಿಗೆ ಮಾದರಿಯಲ್ಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ವೇದಿಕೆಯಲ್ಲಿಗ್ರಾ.ಪ.ಸದಸ್ಯಯಶವಂತ್ ಗೌಡ ಹಾಗೂ ತೀರ್ಪುಗಾರದ  ಪ್ರವೀಣ್ ಕುಮಾರ್ ಶಿಕ್ಷಕರು ಮತ್ತು ಮನುಜು ವೇಣೂರು ಉಪಸ್ಥಿತರಿದ್ದರು.

ಕೇಶವ ಗೌಡ ಕಂಗೀತ್ತಿಲು ಸ್ವಾಗತಿಸಿ ನವೀನ್ ಕುಮಾರ್ ವಾದ್ಯಕೋಡಿ ವಂದಿಸಿದರು. ಪ್ರವೀಣ್ ಗೌಡ ಮಾವಿನಕಟ್ಟೆ ನಿರೂಪಿಸಿದರು.ರವಿಚಂದ್ರ, ಗಣೇಶ್, ಜಯಂತ್ ಹಾಗೂ ಅನಿಲ್ ಸಹಕರಿಸಿದರು.

 

Exit mobile version