Site icon Suddi Belthangady

ಚಿಂತಕ,ಎಸ್ ಡಿ ಎಂ ಹೈಸ್ಕೂಲ್ ಧರ್ಮಸ್ಥಳದ ನಿವೃತ್ತ ಮುಖ್ಯೋಪಾಧ್ಯಾಯ ರಘುನಾಥ ರೈ ನಿಧನ

ಉಜಿರೆ: ಧರ್ಮಸ್ಥಳ ಮಂಜುನಾಥೇಶ್ವರ ಹೈಸ್ಕೂಲಿನ ನಿವೃತ್ತ ಶಿಕ್ಷಕ ರಘುನಾಥ ರೈ (84ವ) ಉಜಿರೆಯ ತಮ್ಮ ಸ್ವಗೃಹದಲ್ಲಿ ವಿಧಿವಶರಾದರು. ಇವರು ಶಿಕ್ಷಣದ ಬಗ್ಗೆ,ಸಮಾಜಮುಖಿ ಯೋಚನೆಗಳ ಮೂಲಕ ಜನಾನುರಾಗಿಯಾಗಿ ರೈ ಮಾಷ್ಟ್ರು ಎಂದೇ ಚಿರಪರಿಚಿತರಾಗಿದ್ದರು.

1947ರ ಸ್ವಾತಂತ್ರ್ಯ ದಿನದ ಬಗ್ಗೆ ಸುದ್ದಿಗೆ ಸಂದರ್ಶನ ನೀಡಿದ್ದ ರೈ ಮಾಷ್ಟ್ರು

ತನ್ನ ಬಾಲ್ಯದ ಬಗ್ಗೆ, 1947ರ ಸ್ವಾತಂತ್ರ್ಯ ದಿನದಂದಿನ ಸಂಭ್ರಮದ ಬಗ್ಗೆ, ಬ್ರೀಟಿಷ್ ಅಧಿಕಾರಿಗಳನ್ನು ನೋಡಿದ ನೆನಪುಗಳ ಬಗ್ಗೆ ರಘುನಾಥ ರೈ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಸಂದರ್ಶನ ನೀಡಿದ್ದರು.

ಈ ವೇಳೆ ಅವರು ನಮ್ಮ ತಾಲೂಕು, ಜಿಲ್ಲೆ, ರಾಜ್ಯ, ದೇಶ ಹೇಗೆ ಬದಲಾಗುತ್ತಾ ಹೋಯಿತು ಅನ್ನುವುದರ ಕುರಿತು ಕೂಡ ಮಾತನಾಡಿದ್ದರು.

ಶಿಷ್ಯರ ಅಚ್ಚುಮೆಚ್ಚಿನ ಶಿಕ್ಷಕ,ಸಮಾಜ ಸೇವಕ

ಶಿಕ್ಷಕರಾಗಿದ್ದಾಗ ರೈ ಮಾಷ್ಟ್ರು ಎಂದೇ ಪ್ರಖ್ಯಾತಿ ಪಡೆದಿದ್ದ ರಘುನಾಥ ರೈಯವರಿಗೆ ಅಪಾರ ಶಿಷ್ಯ ವೃಂದವಿದೆ. ಇವರು ತಮ್ಮ ವಿದ್ಯಾರ್ಥಿಗಳಲ್ಲೂ ಸಮಾಜಮುಖಿ ಚಿಂತನೆ ಮೂಡಿಸುತ್ತಿದ್ದರು.

ದಿನ (ಆಗಸ್ಟ್ 15 1947)ದ ನೆನಪುಗಳನ್ನು ಮೆಲುಕು ಹಾಕಿದ್ದರು. ಅಲ್ಲದೇ ಅಂದಿನಿಂದ ಇಂದಿನವರೆಗೆ ದೇಶ ಬದಲಾದ ಬಗ್ಗೆಯೂ ಮಾತನಾಡಿದ್ದರು. ಗ್ರಾಮೀಣ ಭಾಗದ ಮಕ್ಕಳಿಗೂ ಶಿಕ್ಷಣ ಸಿಗಬೇಕು ಎಂಬ ಧೋರಣೆ ಹೊಂದಿದವರಾಗಿದ್ದರು.

ಇವರು ಪತ್ನಿ ಲೀಲಾವತಿ ರೈ, ಮಕ್ಕಳಾದ ರಾಮಕೃಷ್ಣ ರೈ, ಹರಿದಾಸ್ ರೈ, ಮೋಹನ್ ದಾಸ್ ರೈ, ಸೊಸೆಯಂದಿರು, ಮೊಮ್ಮಕ್ಕಳು,  ಬಂಧು ಮಿತ್ರರು, ಶಿಷ್ಯ ವೃಂದವನ್ನು ಅಗಲಿದ್ದಾರೆ.

Exit mobile version