Site icon Suddi Belthangady

ಗುರುವಾಯನಕೆರೆ: ಎಕ್ಸೆಲ್ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಣೆ

ಗುರುವಾಯನಕೆರೆ: ಎಕ್ಸೆಲ್ ಕಾಲೇಜಿನಲ್ಲಿ ಗಾಂಧೀ ಜಯಂತಿ ಆಚರಣೆಯನ್ನು ಅ.2ರಂದು ಆಚರಿಸಲಾಯಿತು.

ಮಹಾತ್ಮ ಗಾಂಧೀಜಿ ಯವರು ಸರಳ , ಸಾತ್ವಿಕ ಜೀವನ ನಡೆಸುವ ಮೂಲಕ ತನ್ನ ಬದುಕೇ ತನ್ನ ಸಂದೇಶ ಎಂದು ಸಾರಿದವರು. ಅವರ ಸಜ್ಜನಿಕೆಯನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕಾದ ಆವಶ್ಯಕತೆಯಿದೆ ಎಂದು  ಗುರುವಾಯನಕೆರೆ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಹೇಳಿದರು.

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿನಿಯರಾದ ಪಾವನಿ,ಪಂಚಮಿ, ಪರಿಣತ , ನಕ್ಷತ್ರ,ಮಾನ್ಯ ಪ್ರಾರ್ಥನೆ ಹಾಡಿದರು. ತೃಷಾ ಆರ್ ಶೇಖರ್, ಇಮ್ರಾಝ್ ಬಾಗಲ್ ಕೋಟ್ ಗಾಂಧೀಜಿಯವರ ಬಗೆಗೆ ಭಾಷಣ ಮಾಡಿದರು.

ಕಾರ್ತಿಕ್, ಪ್ರತೀಕ್, ಸುನಿಲ್,ಹರೀಶ್ ” ವೈಷ್ಣವ ಜನತೋ” ಹಾಡು ಹೇಳಿದರು. ಪ್ರಾಧ್ಯಾಪಕ ಪುರುಷೋತ್ತಮ್ ಸ್ವಾಗತಿಸಿ, ನಿರೂಪಿಸಿದರು. ಶಂಕರ್ ಸಿಂಗ್ ವಂದಿಸಿದರು.

Exit mobile version