Site icon Suddi Belthangady

ಕಳಿಯ ಗ್ರಾ.ಪಂ. ಮಾಜಿ ಸದಸ್ಯ ವಿಶ್ವನಾಥ ಪೂಜಾರಿ ಮುರತ್ತಮೇಲು ನಿಧನ

ನ್ಯಾಯತರ್ಪು : ನಾಳ ಸಮೀಪದ ಮುರತ್ತಮೇಲು ನಿವಾಸಿ ವಿಶ್ವನಾಥ ಪೂಜಾರಿ (51 ವರ್ಷ) ಅಲ್ಪಕಾಲದ ಅನಾರೋಗ್ಯದಿಂದ  ಅ.2 ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಕಳಿಯ ಗ್ರಾಮ ಪಂಚಾಯತು ಮಾಜಿ ಸದಸ್ಯರಾಗಿ, ಪ್ರಗತಿಪರ ಕೃಷಿಕರಾಗಿ, ತಣ್ಣೀರುಪಂತ ಮೂರ್ತೆದಾರರ ಸಂಘದ ಸದಸ್ಯರಾಗಿ, ನಾಳ ಶ್ರೀ ದುರ್ಗಾ ಯಂಗ್ ಸ್ಟಾರ್ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ನಾಳ ಅಂಗನವಾಡಿ ಕೇಂದ್ರಕ್ಕೆ ಧ್ವಜ ಸ್ಥಂಭ ನೀಡಿದ ಹಾಗೂ ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಸಂಸ್ಥೆಗಳ ಕೊಡಗೈದಾನಿಯಾಗಿದ್ದರು. ಗೇರುಕಟ್ಟೆ ವಿಶ್ವ ಚಿಕನ್ ಸೆಂಟರ್ ಮಾಲೀಕರಾಗಿದ್ದರು.

ಮೃತರು ತಾಯಿ ಮೋನಮ್ಮ ಇಬ್ಬರು ಸಹೋದರರು, ಐವರು ಸಹೋದರಿಯರು, ಬಂಧು ಬಳಗವನ್ನು ಅಗಲಿದ್ದಾರೆ.

Exit mobile version