Site icon Suddi Belthangady

ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಮಂಗಳೂರು ತಹಶೀಲ್ದಾರ್ ಮತ್ತು ಸಹಾಯಕ

ಬೆಳ್ತಂಗಡಿ: ಮಂಗಳೂರು ಮಿನಿವಿಧಾನ ಸೌಧದಲ್ಲಿ ಮಂಗಳೂರು ತಾಲೂಕು ತಹಶೀಲ್ದಾರ್ ಮತ್ತು ಸಹಾಯಕನೊಬ್ಬ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಸೆ.30ರಂದು ನಡೆದಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.

ಮಂಗಳೂರು ತಾಲೂಕು ತಹಶೀಲ್ದಾರ್,   ಬೆಳ್ತಂಗಡಿ ನಿವಾಸಿ  ಪುರಂದರ್  ಹೆಗ್ಡೆ (54) ಮತ್ತು ಮೂಲತಃ ವಿಜಯಪುರ ನಿವಾಸಿ ಸಹಾಯಕ ಸಿಬ್ಬಂದಿ ಶಿವಾನಂದ ನಾಟೇಕರ್(45) ಪ್ರಕರಣದ ಆರೋಪಿಗಳು.

ಶಿವಾನಂದ್ ಲಂಚದ ದಾಹಕ್ಕೆ ಹತಾಶೆಗೊಂಡ ದಂಪತಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ಆರಂಭಿಸಿದ ಲೋಕಾಯುಕ್ತರು ಸೆ.30ರಂದು ಲಂಚ ಸ್ವೀಕರಿಸುತ್ತಿದ್ದಾಗ ವಶಕ್ಕೆ ಪಡೆದಿದ್ದಾರೆ. ಶಿವಾನಂದ್ ನನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಂತೆ ತಹಶೀಲ್ದಾರ್ ಪರವಾಗಿ ತಾನು ಲಂಚ ಪಡೆದಿರುವುದಾಗಿ ಶಿವಾನಂದ್ ಬಾಯಿಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಪುರಂದರ್ ಹೆಗ್ಡೆ ಮತ್ತು ಶಿವಾನಂದ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Exit mobile version