Site icon Suddi Belthangady

ತುಳುವೆರೆ ಚಾವಡಿ  ಬೆಂಗಳೂರು ವತಿಯಿಂದ ಜೋಕುಲೆ ಪದೊಕುಲು ವಿಜ್ಞಾಪಣೆ ಬಿಡುಗಡೆ : ಡಾ|| ಡಿ ವೀರೇಂದ್ರ ಹೆಗ್ಗಡೆಯವರಿಂದ ಲೋಕಾರ್ಪಣೆ

ಧರ್ಮಸ್ಥಳ:  ತುಳುವೆರೆ ಚಾವಡಿ ರಿ. ಬೆಂಗಳೂರು ವತಿಯಿಂದ ಸಣ್ಣ ಮಕ್ಕಳಿಗೆ “ಜೋಕುಲೆ ಪದೊಕುಲು ಎಂಬ ವಿಷಯದ ವಿಜ್ಞಾಪಣೆಯನ್ನು ಪೂಜ್ಯ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಸೆ.29 ರಂದು ಧರ್ಮಸ್ಥಳದಲ್ಲಿ ಬಿಡುಗಡೆಗೋಳಿಸಿದರು.

ಬೆಂಗಳೂರಿನಲ್ಲಿರುವ ನಮ್ಮ ತುಳುನಾಡಿನ ಎಲ್ಲಾ ಭಾಂದವರನ್ನು ಒಟ್ಟುಗೂಡಿಸುವ ತುಳುವೆರೆ ಚಾವಡಿ ರಿ. ಬೆಂಗಳೂರು ವತಿಯಿಂದ ತುಳು ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ತುಳು ಕನ್ನಡ ಸಾಹಿತಿಗಳಿಂದ ಮತ್ತು ಹಲವು ವಿದ್ವಾಂಸರ ಜೊತೆ ಚರ್ಚಿಸಿ ಮಕ್ಕಳಿಗಾಗಿಯೇ ತುಳು ಸಂಗೀತ, ಸಾಹಿತ್ಯ, ತುಳು ಅನಿಮೇಷನ್ ವೀಡಿಯೋ ಹಾಗೂ ಈಗೀನ ತಂತ್ರಜ್ಞಾನ ಮೂಲಕ ಮಕ್ಕಳಿಗೆ ತುಳು ಭಾಷೆಯನ್ನು ಕಲಿಸುವ ನಿಟ್ಟಿನಲ್ಲಿ “ಜೋಕುಲೆ ಪದೊಕುಲು ಎಂಬ ವಿಷಯದ ವಿಜ್ಞಾಪಣೆಯನ್ನು ಪೂಜ್ಯ ಡಾ, ಡಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಗೌರವಾಧ್ಯಕ್ಷ ಪುರುಷೋತ್ತಮ ಚೇಂಡ್ಲಾ, ಅಧ್ಯಕ್ಷರಾದ ಉಮೇಶ್ ಪೂಂಜಾ, ಪ್ರಧಾನ ಕಾರ್ಯದರ್ಶಿ ರಘವೀರ್ ನಾಯರ್, ಮಕ್ಕಳ ತುಳು ಸಾಹಿತ್ಯ ಸಂಘಟಕರಾದ ಸತೀಶ್ ಅಗ್ಪಲ್, ಮುಖ್ಯ ಸಲಹೆಗಾರರಾದ ಆಶಾನಂದ ಕುಲಶೇಖರ್, ಕೆ.ಎನ್ ಅಡಿಗ, ಜಗನ್ನಾಥ್, ಯಾದವ ಕಲ್ಲಾಪು, ವಿಶ್ವನಾಥ್ ಕುಲಾಲ್ ಉಪಸ್ಥಿತರಿದ್ದರು.

Exit mobile version