Site icon Suddi Belthangady

 ಕೆ. ಎನ್. ಆರ್. ಯೂನಿವರ್ಸಿಟಿ ವರಂಗಲ್ ನಡೆಸಿದ, ಎಂ.ಎಸ್. ಶಲ್ಯ ತಂತ್ರ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ಪರೀಕ್ಷೆಯಲ್ಲಿ, ಕೆದಿಲ ನಿವಾಸಿ ಡಾ|| ಅಮೃತಗೌರಿ.ವೈ ಇವರಿಗೆ ಚಿನ್ನದ ಪದಕ

ಕಣಿಯೂರು:  2021-2022 ಸಾಲಿನಲ್ಲಿ,   ಕೆ. ಎನ್. ಆರ್. ಯೂನಿವರ್ಸಿಟಿ ವರಂಗಲ್ ನಡೆಸಿದ ಎಂ.ಎಸ್. ಶಲ್ಯ ತಂತ್ರ ( ಆಯುರ್ವೇದ ಶಸ್ತ್ರಚಿಕಿತ್ಸಾ ವಿಭಾಗ) ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ಪರೀಕ್ಷೆಯಲ್ಲಿ ಡಾ|| ಅಮೃತಗೌರಿ.ವೈ. ಇವರು  ಚಿನ್ನದ ಪದಕವನ್ನು ಪಡೆದಿದ್ದಾರೆ.

ಇವರು ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಕೆದಿಲ ನಿವಾಸಿ ದಿ||ಯರ್ಮುಂಜ ರಘುರಾಮ ಜೋಯಿಸ ಹಾಗೂ ಶ್ರೀಮತಿ ವಿದ್ಯಾ ಪರಮೇಶ್ವರಿ ದಂಪತಿಯ ದ್ವಿತೀಯ ಪುತ್ರಿ. ಯಾದಗಿರಿಯಲ್ಲಿ ನೆಲೆಸಿರುವ ಡಾ||ಎಂ.ವಿ.ವಿ.ದುರ್ಗಾ ಪ್ರಸಾದ್ ರ ಧರ್ಮಪತ್ನಿ.

ಪ್ರಸ್ತುತ ಯಾದಗಿರಿಯ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಶಲ್ಯ ತಂತ್ರ ವಿಭಾಗದ ಅಧ್ಯಾಪಕಿಯಾಗಿರುವ ಇವರು, ಅಡ್ಯನಡ್ಕದ ಜನತಾ ವಿದ್ಯಾಸಂಸ್ಥೆ, ಪದ್ಮುಂಜದ ಸರ್ಕಾರಿ ಪ್ರೌಢಶಾಲೆ ಮತ್ತು ಮಂಗಳೂರಿನ ಶಾರದಾ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿನಿ.ಆಯುರ್ವೇದ ಪದವಿ ಶಿಕ್ಷಣವನ್ನು ಪ್ರತಿಷ್ಠಿತ ಎಸ್.ಡಿ.ಎಂ. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಸನದಲ್ಲಿ ಮುಗಿಸಿ, ಸ್ನಾತಕೋತ್ತರ ಪದವಿಯನ್ನು ಹೈದರಾಬಾದಿನ ಡಾ|| ಬಿ. ಆರ್.ಕೆ. ಆರ್. ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಶಲ್ಯ ತಂತ್ರ ವಿಭಾಗದಲ್ಲಿ ಪಡೆದಿದ್ದಾರೆ. “ಸಕ್ಕರೆ ಖಾಯಿಲೆಯ ರೋಗಿಗಳಲ್ಲಿ ಉಂಟಾಗುವ ದೀರ್ಘಕಾಲಿನ ಹುಣ್ಣು ಗಾಯಗಳಲ್ಲಿ- ಹರಿದ್ರಾ ಹರೀತಕಿ ರಸಕ್ರಿಯಾ ಕಾರ್ಯಕ್ಷಮತೆ “ಬಗ್ಗೆ ಸ್ನಾತಕೋತ್ತರ ಪದವಿಯ ಅವಧಿಯಲ್ಲಿ ವಿಶೇಷ ಅಧ್ಯಯನ ನಡೆಸಿದ್ದರು.

Exit mobile version