Site icon Suddi Belthangady

ಪಿ.ಎಫ್.ಐ ಸಂಘಟನೆ ನಿಷೇಧಿಸಿದ ಕೇಂದ್ರ ಸರ್ಕಾರ:ಅದರ ಸಹ ಸಂಘಟನೆಗಳಿಗೂ ನಿಷೇಧ

ದೇಶದಲ್ಲಿ ಪಿ ಎಫ್ ಐ ಸಂಘಟನೆಯನ್ನು ಐದು ವರ್ಷಗಳ ಕಾಲ ನಿಷೇಧಗೊಳಿಸಿ ಆದೇಶ ಹೊರಡಿಸಿದೆ. ದೇಶದ ಕಾನೂನಿಗೆ ಧಕ್ಕೆ ತರುತ್ತದೆ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿರುವುದಾಗಿ ತಿಳಿಸಿದೆ.

ಉಗ್ರ ಚಟುವಟಿಕೆಗಳಿಗೆ ಸಹಕಾರ, ದೇಶದ ಆಂತರಿಕ ಭದ್ರತೆಗೆ ಧಕ್ಕೆ, ಗಲಭೆಗಳಲ್ಲಿನ ಭಾಗಿದಾರಿಕೆ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಪಿಎಫ್ ಐ ಜೊತೆಗೆ ಅದರ ಅಧೀನ ಸಂಘಟನೆಗಳಾದ ರಿಹಾಬ್ ಇಂಡಿಯಾ ಪೌಂಡೇಷನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫಿಡರೇಷನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್
(NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್,
Empower India Foundation &Rehab Foundation (ಕೇರಳ) ಮುಂತಾದ ಸಂಘಟನೆಗಳನ್ನೂ ನಿಷೇಧಿಸಲಾಗಿದೆ.
ಇತ್ತೀಚೆಗೆ ರಾಷ್ಟ್ರೀಯ ತನಿಖಾ ದಳ ದೇಶಾದ್ಯಂತ PFI ಸಂಘಟನೆಗಳ ಅನುಮಾನಾಸ್ಪದ ವ್ಯಕ್ತಿಗಳ ಮನೆ ಮೇಲೆ ದಾಳಿ ನಡೆಸಿ ಹಲವರನ್ನು ಬಂಧಿಸಿತ್ತು. ಅವರಲ್ಲಿ ಹಲವರ ತನಿಖೆ ನಡೆಯುತ್ತಿರುವಾಗಲೇ ಈಗ ಪಿಎಫ್ ಐ ನಿಷೇಧ ಘೋಷಣೆಯಾಗಿದೆ.

Exit mobile version