ಮದ್ದಡ್ಕ: ಪೇಟೆಯ ಬಳಿ ಟೆಂಪೋ ಮತ್ತು ಬೈಕ್ ನಡುವೆ ಅಪಘಾತ, ಇಬ್ಬರಿಗೆ ಗಾಯ

0
1747

ಮದ್ದಡ್ಕ: ಇಲ್ಲಿಯ ಮದ್ದಡ್ಕ ಪೇಟೆಯ ಬಳಿ ಟೆಂಪೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು,  ಬೈಕ್ ಸವಾರ ಮತ್ತು ಬೈಕ್‌ನಲ್ಲಿದ್ದ ಮಹಿಳೆ  ಗಾಯಗೊಂಡ ಘಟನೆ ಸೆ.26ರಂದು ಸಂಜೆ ಸಂಭವಿಸಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೋ ಮಗುಚಿ ಬಿದ್ದಿದೆ.  ಬೈಕ್‌ನ ಹಿಂಬಂದಿಯಲ್ಲಿದ್ದ ಮಹಿಳೆಗೆ ಗಂಭೀರ ಏಟು ತಗಲಿದ್ದು, ಇಬ್ಬರನ್ನು ಸ್ಥಳೀಯರ ಸಹಕಾರದಲ್ಲಿ ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬೈಕ್ ಸವಾರ ರಕ್ಷಿತ್  ಬಳ್ಳಮಂಜ ನಿವಾಸಿ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here