ಸರಕಾರದ ಆದೇಶದಂತೆ ಪ.ವರ್ಗಗಳ ಕಾಲನಿಯಲ್ಲೆ ಗೃಂಥಾಲಯ ನಿರ್ಮಾಣಕ್ಕೆ ಆಗ್ರಹ

0

 

 

ಲಾಯಿಲ:   ಕರ್ನಾಟಕ ಸರಕಾರದ ವಿಶೇಷ ಘಟಕ ಯೋಜನೆ ಹಾಗೂ ಪ.ವರ್ಗಗಳ ಉಪಯೋಜನೆಯಡಿ ಲಾಯಿಲ ಗ್ರಾಮಕ್ಕೆ ಸರಕಾರದ ಆದೇಶ ಸಂಖ್ಯೆKPRC-ADM20RBL/28/ 2021-KPRC-DD2-KPRC ನಂತೆ 5 ಲಕ್ಷ ಹಾಗೂ ನರೇಗಾದಡಿ 5 ಲಕ್ಷದಂತೆ ಒಟ್ಟು 10 ಲಕ್ಷ ಅನುದಾನದಲ್ಲಿ ಸರಕಾರದ ಸ್ಪಷ್ಟ ಆದೇಶದನ್ವಯ ಪ.ವರ್ಗಗಳ ಕಾಲನಿಯಲ್ಲಿ ಗ್ರಂಥಾಲಯ ನಿರ್ಮಾಣದ ಆದೇಶ ಕಳೆದ , 6 ತಿಂಗಳ ಹಿಂದೆ ಲಾಯಿಲ ಪಂಚಾಯತಿಗೆ ಬಂದಿದ್ದು, ಈ ತನಕ ಅದರ ಕಾಮಗಾರಿ ಪ್ರಾರಂಭಗೊಳಿಸದೆ, ಇದೀಗ ಸರಕಾರದ ಆದೇಶಕ್ಕೆ ವಿರುದ್ಧವಾಗಿ ಪಂಚಾಯತ್ ಆಡಳಿತವು, ಲಾಯಿಲ ಗ್ರಾ ಪಂ ನ ಆವರಣದಲ್ಲೇ  ಗ್ರಂಥಾಲಯ ಮಾಡಲು ಹೊರಟಿದ್ದು, ಇದು ಪ.ವರ್ಗಗಳಿಗೆ ಮಾಡುವ ಬಹು ದೊಡ್ಡ ಅನ್ಯಾಯ.

ಈಗಾಗಲೇ ಪುತ್ರಬೈಲುವಿನ ಬಳಿ ಜಿಲ್ಲಾ ಪಂಚಾಯತ್ ರಸ್ತೆಯ ಸನಿಹದಲ್ಲೆ  ಪ.ಜಾತಿಗೆ ಕಳೆದ ಹಲವಾರು ವರುಷಗಳ ಹಿಂದೆಯೇ 8 ಸೆಂಟ್ಸ್ ಸ್ಥಳವು ಮಂಜೂರಾಗಿದ್ದು, ಪಹಣಿಯಲ್ಲಿ ಕೂಡಾ ದಾಖಲಿರುತ್ತದೆ. ಈಗಾಗಲೇ ಅಲ್ಲಿ ಸಣ್ಣದಾದ ಪ. ಜಾತಿಯ ಹಳೆಯ ಸಭಾಭವನವೂ ಕೂಡಾ ಇದೆ. ಆಲ್ಲದೆ ನಮ್ಮ ಪ.ಜಾತಿ ಮತ್ತು ಪಂಗಡಗಳ ಸುಮಾರು 200 ಕ್ಕೂ ಹೆಚ್ಚು ಕುಟಂಬಗಳು ಅದೇ ಕಾಲನಿಯಲ್ಲಿದೆ.

ಅಲ್ಲಿ ಮತ್ತು ಅಲ್ಲಿಯೇ ಅಕ್ಕ ಪಕ್ಕದಲ್ಲಿರುವ ಇತರ ಪ.ಜಾತಿ ಕುಟುಂಬಗಳ ವಿದ್ಯಾರ್ಥಿಗಳೇ ನಕರಿಗೆ ಈ  ಗ್ರಂಥಾಲಯ ಬಹು ಉಪಯೋಗವಾಗುತ್ತದೆ. ಅಲ್ಲದೆ ಜಿ.ಪಂ ರಸ್ತೆಯ ಸನಿಹದಲ್ಲಿ ಇರುವ ಕಾರಣ ಎಲ್ಲಾ ಓದುಗರಿಗೂ ಪ್ರಯೋಜನವಾಗುವುದು ಆದರೆ. ಲಾಯಿಲ ಗ್ರಾ.ಪಂ ಇದೀಗ ಅಲ್ಲಿ ಗೃಂಥಾಲಯ ಮಾಡುವ ಪ್ರಸ್ಥಾವನೆಯನ್ನು ಮಾಡದೆ ಇರುವುದರಿಂದ ನಮ್ಮ ಸಮಾಜದ ಬಂದುಗಳು ಇದನ್ನು ಪ್ರಶಿಸುವಂತಾಗಿದೆ.

ಯಾವುದೇ ಕಾರಣಕ್ಕೂ ಸರಕಾರದ ಆದೇಶದಂತೆ ಪ.ಜಾತಿ ಮತ್ತು ಪಂಗಡಗಳ ಕಾಲನಿಯಾದ ಪುತ್ರಬೈಲುವಿಲ್ಲಿ ನಮ್ಮ ಸಮಾಜಕ್ಕೆಂದೇ ಮಂಜೂರಾದ ಸ್ಥಳದಲ್ಲೇ ಗ್ರಂಥಾಲಯ ನಿರ್ಮಿಸಬೇಕೇ ಹೊರತು ಸರಕಾರದ ಆದೇಶ ಉಲ್ಲಂಘಿಸಿ ಗ್ರಾ. ಪಂ ಆವರಣದಲ್ಲಿ ಮಾಡುವುದಕ್ಕೆ ನಮ್ಮ ತೀವ್ರ ಆಕ್ಷೇಪಣೆಯಿದೆ. ಇಲ್ಲದಿದ್ದರೆ ನಾವು ಹೋರಾಟಕ್ಕೂ ಇಳಿಯಬೇಕಾದೀತು ಎಂದು ಲಾಯಿಲ ಗ್ರಾ.ಪಂ ಗೆ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾ.ಪಂ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಗ್ರಾ ಪಂ ಉಪಾಧ್ಯಕ್ಷರನ್ನು ಭೇಟಿಯಾಗಿ ಮನವಿಯೊಂದಿಗೆ ಆಗ್ರಹಿಸಲಾಯಿತು. ಮತ್ತು ಈ ಮನವಿಯನ್ನು ತಾ.ಪಂ ಹಾಗೂ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೂ ಕಳುಹಿಸಲಾಯಿತು.

ಈ ನಿಯೋಗದಲ್ಲಿ ಸಮಾಜದ ಪ್ರತಿನಿಧಿಗಳಾಗಿ ಉದಯಕುಮಾರ್ ಪುತ್ತಬೈಲು , ಸುರೇಶ್ ಬೈರ, ಹೆಚ್.ಬಿ  ಸಂಜೀವ, ಗಂಗಾಧರ, ಯೋಗೀಶ್ ,ಸಾವಿತ್ರಿ ಮಂಜುನಾಥ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here