ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ತಾಲೂಕು ಮಟ್ಟದ ಛದ್ಮವೇಷ ಸ್ಪರ್ಧೆಯಲ್ಲಿ ಕು.ಚೈತ್ರ ಪ್ರಥಮ, ಲಘಸಂಗೀತದಲ್ಲಿ ಅದ್ವಿತಿ ತೃತೀಯ

0
122

ಅರಸಿನಮಕ್ಕಿ: ಇಲ್ಲಿನ ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿಯ 7ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಚೈತ್ರ ಇವಳು ಸೆ.24 ರಂದು ರಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಛದ್ಮವೇಷದಲ್ಲಿ ಹಿರಿಯ ವಿಭಾಗದಿಂದ ಸ್ಪರ್ಧಿಸಿ, ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈಕೆ ಲಕ್ಷ್ಮಣ ಗೌಡ ಮತ್ತು ಶ್ರೀಮತಿ ಯಶೋದಾ ದಂಪತಿಯ ಸುಪುತ್ರಿ.

ಹಾಗೆಯೇ ಲಘುಸಂಗೀತದಲ್ಲಿ ಹಿರಿಯ ವಿಭಾಗದಲ್ಲಿ ಅದ್ವಿತಿ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ. ಈಕೆ ಅರಸಿನಮಕ್ಕಿಯ ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಗೌರವ ಶಿಕ್ಷಕಿ ಶ್ರೀಮತಿ ದಿವ್ಯಶ್ರೀ ಹಾಗೂ ನೇಲ್ಯಡ್ಕ ಪ್ರೌಢ ಶಾಲೆಯ ಗಣಿತ ಶಿಕ್ಷಕರಾದ ಶ್ರೀ ಅರವಿಂದ ಗೋಖಲೆ ಇವರ ಸುಪುತ್ರಿ.

LEAVE A REPLY

Please enter your comment!
Please enter your name here