Site icon Suddi Belthangady

ಕೊಲ್ಪಾಡಿ ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಸಪ್ತಾಹ

ಬೆಳಾಲು : ಬೆಳಾಲು ಗ್ರಾಮದ ಕೊಲ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಸೆ.21ರಂದು ನಡೆಯಿತು.

ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ  ಚೈತ್ರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಮಂಜು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಧರ್ಮಸ್ಥಳದ ಆರೋಗ್ಯ ಇಲಾಖೆಯ ಎಲ್ ಎಚ್ ವಿ ಆದ  ವಿಜಯಲಕ್ಷ್ಮಿ ಅವರು ನಿತ್ಯ ಜೀವನದಲ್ಲಿ ಪೌಷ್ಟಿಕಾಂಶದ ಮಹತ್ವ ಮತ್ತು ಆರೋಗ್ಯಕರ ಆಹಾರ ಸೇವನೆಯ ಮಹತ್ವ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯೆ  ವಿದ್ಯಾ ಶ್ರೀನಿವಾಸ್ ಗೌಡ, ಹಿರಿಯ ಮಹಿಳಾ ಆರೋಗ್ಯ ಸಂದರ್ಶಕಿ  ವಿಜಯಲಕ್ಷ್ಮಿ, ಸಂಜೀವಿನಿ ಒಕ್ಕೂಟದ ಎಂ ಬಿ ಕೆ ಹರಿಣಾಕ್ಷಿ ,ಕಿರಿಯ ಮಹಿಳಾ ಆರೋಗ್ಯ ಸಂದರ್ಶಕಿ  ಹರಿಣಾಕ್ಷಿ ,ಸಮುದಾಯ ಆರೋಗ್ಯ ಅಧಿಕಾರಿ ತೇಜಾವತಿ, ಆಶಾ ಕಾರ್ಯಕರ್ತೆ  ಪ್ರೇಮ ,ಸಂಜೀವಿನಿ ಒಕ್ಕೂಟದ ಎಲ್ ಸಿ ಆರ್ ಪಿ ವಸಂತಿ, ಎಲ್ಲಾ ಗರ್ಭಿಣಿಯರು ಪೋಷಕರು ಮಕ್ಕಳು ಹಾಗೂ ಸ್ರೀ ಶಕ್ತಿ ಸಂಘಗಳ ಸದಸ್ಯರು, ಬಾಲ ವಿಕಾಸ ಸಮಿತಿ, ಆಶಾ ಕಾರ್ಯಕರ್ತೆಯರು , ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ  ವಿದ್ಯಾ ಶ್ರೀನಿವಾಸ್ ಗೌಡ ಇವರು ಅಂಗನವಾಡಿಯ ಎಲ್ಲಾ ಪುಟಾಣಿಗಳಿಗೆ ಡ್ರಾಯಿಂಗ್ ಪುಸ್ತಕ ಹಾಗೂ ಬಣ್ಣದ ಪೆನ್ಸಿಲ್ ಅನ್ನು ಕೊಡುಗೆಯಾಗಿ ನೀಡಿದರು.
ಅಂಗನವಾಡಿ ಕಾರ್ಯಕರ್ತೆ  ಲೀಲಾ ನಿರೂಪಿಸಿ,  ಪ್ರೇಮ ಸ್ವಾಗತಿಸಿ, ವಸಂತಿ ಧನ್ಯವಾದ ಸಲ್ಲಿಸಿದರು.

Exit mobile version