Site icon Suddi Belthangady

ಬೆಳಾಲು ಪ್ರೌಢಶಾಲೆಯಲ್ಲಿ ಪೋಷಣ ಅಭಿಯಾನ

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಬೆಳಾಲಿನಲ್ಲಿ ಪೋಷಣ ಅಭಿಯಾನ ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ ಧರ್ಮಸ್ಥಳ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಶ್ರೀಮತಿ ತ್ರಿವೇಣಿಯವರು ಆಗಮಿಸಿ,  ದಿನಚರಿಯಲ್ಲಿ ರೂಢಿಸಿಕೊಳ್ಳಬೇಕಾದ ಆಹಾರ ನಿಯಮಗಳು ಮತ್ತು ನಮ್ಮ ಪರಿಸರದಲ್ಲಿರುವ ಸೊಪ್ಪು ತರಕಾರಿಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಾದ ಅಮೂಲ್ಯ, ಚಿಂತನ್, ಮನೋಜ್ ಪೌಷ್ಟಿಕಾಂಶದ ಬಗ್ಗೆ ಅನಿಸಿಕೆಗಳನ್ನು ತಿಳಿಸಿದರೆ,ಅಮೃತಾ, ಶ್ರಾವ್ಯ ಪಿ, ಜೀವನಾ, ಕಮರುನ್ನೀಸ, ರಮೀಝ್, ವಿಕಾಸ್ ಮತ್ತು ರಕ್ಷಿತ್ ರವರು ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಮಾರ್ಗದರ್ಶಿ ಶಿಕ್ಷಕಿ ವಾರಿಜಾ ಎಸ್ ಗೌಡರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಚೈತ್ರ ಸ್ವಾಗತಿಸಿ, ಅಭಿಷೇಕ್ ಧನ್ಯವಾದ ಸಲ್ಲಿಸಿದರು. ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ಸಭೆಯ ಮೊದಲು ವಿದ್ಯಾರ್ಥಿಗಳೇ ಸಂಗ್ರಹಿಸಿರುವ ತರಕಾರಿ, ಬೇಳೆಕಾಳುಗಳು, ಹಣ್ಣು ಹಂಪಲು, ಸೊಪ್ಪು ತರಕಾರಿ ಮುಂತಾದವುಗಳ ಅಲಂಕಾರಿಕ ಮಾದರಿಗಳ ಪ್ರದರ್ಶನ ನಡೆಯಿತು.

Exit mobile version