ಬೆಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

0

ಬೆಳಾಲು: ಬೆಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆ. 25 ರಂದು ಬೆಳಾಲು ಗ್ರಾಮ ಪಂಚಾಯತ್‌ ಸಭಾಂಗಣದಲ್ಲಿ ಜರುಗಿತು.

ಸಂಘದ ಆಂತರಿಕ ಸಮಸ್ಯೆಯಿಂದ ಅಧ್ಯಕ್ಷರು ಸೇರಿ ಎಲ್ಲಾ ನಿರ್ದೇಶಕರು ರಾಜೀನಾಮೆ ನೀಡಿರುವುದರಿಂದ ಆಡಳಿತಾಧಿಕಾರಿ ಆದಿತ್ಯ ಸಿ.ರವರ ಅಧ್ಯಕ್ಷತೆಯಲ್ಲಿ ಮಹಾಸಸಭೆ ನಡೆಯಿತು.

ನಂತರ ಮಾತನಾಡಿದ ಅವರು ಸಂಘದ ನೂತನ ಆಡಳಿತ ಮಂಡಳಿಗೆ ಶೀಘ್ರದಲ್ಲಿ ಚುನಾವಣೆ ನಡೆಯಲಿದೆ. ಅನಂತರ ಲಾಭ ವಿಂಗಡಣೆ ಮಾಡಿ ಸದಸ್ಯರಿಗೆ ನೀಡಲಾಗುವುದು. ಸಿಬ್ಬಂದಿ ನೇಮಕಾತಿ ಕುರಿತು ಮುಂದಿನ ದಿನಗಳಲ್ಲಿ ಸೂಕ್ತ ಭದ್ರತಾ ಠೇವಣಿ, ಬಾಂಡ್, ಅರ್ಹತೆ ನೋಡಿ ನಿಯಮನುಸಾರ ನೇಮಿಸಲಾಗುವುದು,ಭದ್ರತಾ ವ್ಯವಸ್ಥೆಗಾಗಿ ಸಿ. ಸಿ. ಕ್ಯಾಮೆರಾ ಅಳವಡಿಸಲಾಗಿದೆ, ಸಂಘದ ಕಟ್ಟಡ ಸೋರುತ್ತಿದ್ದು, ಮುಂದಿನ ನೂತನ ಆಡಳಿತ ಮಂಡಳಿಯ ಚುನಾವಣೆ ಬಳಿಕ ಮೇಲ್ಚಾವಣಿ ನಿರ್ಮಿಸಲಾಗುವುದು ಎಂದರು.

ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಮಾತನಾಡಿ ಸಂಘದ ಬೆಳವಣಿಗೆ ಸದಸ್ಯರು ಮತ್ತು ಆಡಳಿತ ಮಂಡಳಿ ಹೊಂದಾಣಿಕೆಯಿಂದ ನಮ್ಮ ಸಂಸ್ಥೆ ಎಂಬ ಭಾವನೆ ಇರಬೇಕು. ಸದಸ್ಯರು ಪರಿಶುದ್ಧ ಹಾಗೂ ಗುಣ ಮಟ್ಟದ ಹಾಲು ಒದಗಿಸ ಬೇಕು . ಇಲಾಖೆಯು ಒದಗಿಸುವ ಪಶು ಆಹಾರ ಖರೀದಿಸಿದಾಗ ಪಶುಗಳ ಅರೋಗ್ಯ ಮತ್ತು ಉತ್ತಮ ಹಾಲಿ ಸಹಕಾರಿಯಾಗುತ್ತದೆ. ಸರಕಾರದಿಂದ ಮತ್ತು ಇಲಾಖೆಯಿಂದ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.

ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಚಂದ್ರ ಶೇಖರ್ ಮಾಹಿತಿ ನೀಡಿದರು. ಸಭೆಯಲ್ಲಿ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರ ರಾಜೀನಾಮೆ, ಸಿಬ್ಬಂದಿ ನೇಮಕಾತಿ, ಇನ್ನಿತರ ವಿಚಾರದಲ್ಲಿ ಸದಸ್ಯರ ನಡುವೆ ಚರ್ಚೆ ವಾಗ್ವಾದ ನಡೆಯಿತು.ಸಂಘದ ನಿಕಟ ಪೂರ್ವ ಅಧ್ಯಕ್ಷರು,ನಿರ್ದೇಶಕರು,ಮಾಜಿ ಅಧ್ಯಕ್ಷರು,ಸದಸ್ಯರು ಭಾಗವಹಿಸಿದ್ದರು.

ಕಾರ್ಯದರ್ಶಿ ಸುಖೇಶ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು, ಹಾಲು ಪರೀಕ್ಷಕ ದರ್ಶನ್, ಬಿ.ಎಂ.ಸಿ. ನಿರ್ವಾಹಕ ಸುಮಂತ್ ಸಹಕರಿಸಿದರು.

LEAVE A REPLY

Please enter your comment!
Please enter your name here