ಇಂದಬೆಟ್ಟು: ನಿಯಂತ್ರಣ ತಪ್ಪಿ ತೋಡಿಗೆ ಬಿದ್ದ ಕಾರು

0

ಇಂದಬೆಟ್ಟು: ಬೋಜಾರದಿಂದ ಇಂದಬೆಟ್ಟು ಗೆಂದು ಪ್ರಕಾಶ್ ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರೊಂದು ಇಂದಬೆಟ್ಟು ಗ್ರಾಮದ ಪಾಲೆದಬೆಟ್ಟು ಎಂಬಲ್ಲಿ ತೋಡಿಗೆ ಬಿದ್ದ ಘಟನೆ ಸೆ.25ರಂದು ಬೆಳಗ್ಗೆ ನಡೆದಿದೆ.

ಪಾಲೆದಬೆಟ್ಟು ಎಂಬಲ್ಲಿ ರಸ್ತೆಗೆ ಮೋರಿ ಹಾಕಿದ್ದು ಅಲ್ಲಿ ಒಂದು ಬದಿ ತಗ್ಗಿದ್ದು ಇದರಿಂದ ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ತೋಡಿಗೆ ಬಿದ್ದಿದ್ದು ಪ್ರಕಾಶರವರಿಗೆ ಹಾಗೂ ಕಾರಿನಲ್ಲಿದ್ದ ಮಗುವಿಗೆ ಸಣ್ಣಪುಟ್ಟ ಗಾಯವಾಗಿದೆ.

ಇಲ್ಲಿ ಹಲವಾರು ಬೈಕ್ ಗಳು ಕೂಡ ಬಿದ್ದಿವೆ. ಕೂಡಲೇ ಈ ರಸ್ತೆಯನ್ನು ಸರಿಪಡಿಸದಿದ್ದಲ್ಲಿ ಇನ್ನಷ್ಟು ಅನಾಹುತಗಳು ನಡೆಯುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here