ಬಿಎಂಎಸ್ ರಿಕ್ಷಾ ಚಾಲಕರ ಮಾಲಕರ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ನೂತನ ತಾಲೂಕು ಸಮಿತಿ ರಚನೆ

0

ಬೆಳ್ತಂಗಡಿ: ಬಿಎಂಎಸ್ ರಿಕ್ಷಾ ಚಾಲಕರ ಮಾಲಕರ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ನೂತನ ತಾಲೂಕು ಸಮಿತಿ ರಚನೆ ಪ್ರಕ್ರಿಯೆ ಸೆ.24 ರಂದು ಬಿಎಂಎಸ್ ನ ಬೆಳ್ತಂಗಡಿ ಕಚೇರಿಯ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಂಎಸ್ ತಾಲೂಕು ಸಮಿತಿ ಅಧ್ಯಕ್ಷರಾದ ಉದಯ್ ಬಿ.ಕೆ ಅವರು ವಹಿಸಿದ್ದರು

ಅಧ್ಯಕ್ಷರಾಗಿ ಕೃಷ್ಣ ಪೂಜಾರಿ ಬೆಳಾಲು, ಕಾರ್ಯದರ್ಶಿಯಾಗಿ ರಮೇಶ್ ಕೆ. ಮಡಂತ್ಯಾರ್, ಕೋಶಾಧಿಕಾರಿಯಾಗಿ ಪ್ರಶಾಂತ್ ಗರ್ಡಾಡಿ ,ಉಪಾಧ್ಯಕ್ಷರಾಗಿ ರಮೇಶ್ ಪೂಜಾರಿ ಉಜಿರೆ, ಲವಕುಮಾರ್‌ ಪೊಯ್ಯೆ ಉರುವಾಲು, ರಾಜೇಶ್ ಕೊಕ್ಕಡ, ಜೊತೆ ಕಾರ್ಯದರ್ಶಿಗಳಾಗಿ ಸುನಿಲ್ ದೊಂಡೋಲೆ , ಯಶೋಧರ್ ಪೂಜಾರಿ ಮುಂಡಾಜೆ, ನಿರಂಜನ ಕುಕ್ಕೇಡಿ, ಹಾಗೂ ಉಜಿರೆ ರಿಕ್ಷಾ ಚಾಲಕರ ಹಿರಿಯ ಮುಖಂಡರಾದ ಉಮೇಶ್ ಅತ್ತಾಜೆ ಅವರನ್ನು ಗೌರವ ಸಲಹೆಗಾರರಾಗಿ ಸರ್ವಾನುಮತದಿಂದ ಅಯ್ಕೆ ‌ಮಾಡಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ಮಜ್ದೂರ್ ಸಂಘದ ಹಿರಿಯ ನಾಯಕರಾದ ಕೆ ವಿಶ್ವನಾಥ ಶೆಟ್ಟಿ ಅವರು ಉಪಸ್ಥಿತರಿದ್ದು ರಿಕ್ಷಾ ಚಾಲಕ ಸಂಘದ ಪ್ರಮುಖ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ ರಿಕ್ಷಾ ಚಾಲಕರು ವೃತ್ತಿ ಅದು ಸಮಾಜಮುಖಿ ವೃತ್ತಿಯಾಗಿದೆ. ಈ ಸಂದರ್ಭ ಚಾಲಕ ವೃತ್ತಿಯಲ್ಲಿರುವಾಗ ನಾವು ನಡೆದುಕೊಳ್ಳಬೇಕಾದ ರೀತಿ ನೀತಿಗಳು ಸಂಘಟನೆ ಸದಸ್ಯರಾದ ಮೇಲೆ ನಡೆದುಕೊಳ್ಳುವ ಬಗೆ ತಿಳಿಸಿಕೊಟ್ಟರು. ನಂತರ ಅವರು ರಿಕ್ಷಾ ಚಾಲಕರಿಗಾಗಿ ಅಸಂಘಟಿತ ಮಂಡಳಿಯನ್ನು ಸ್ಥಾಪಿಸಿ ಸೌಲಭ್ಯಗಳನ್ನು ನೀಡಬೇಕೆಂದು ಬಿಎಂಎಸ್ ನ ವತಿಯಿಂದ ಮಾಡಿದ ಪ್ರಯತ್ನಗಳ ಬಗ್ಗೆ ವಿವರಿಸಿ ಸದ್ರಿ ಸದ್ಯದಲ್ಲೇ ಕರ್ನಾಟಕ ಸರಕಾರ ಚಾಲಕರ ಶ್ರೇಯೋಭಿವೃದ್ಧಿಗೆ ಮಂಡಳಿಯ ರಚನೆಯ ಬಗ್ಗೆ ಮಾನ್ಯ ಕಾರ್ಮಿಕ ಸಚಿವರಿಂದ ಭರವಸೆ ದೊರೆತಿದ್ದು ಈ ಬಗ್ಗೆ ಮಂಡಳಿ ರಚನೆಯ ಹಂತದ ಕಾರ್ಯಗಳು ಆಗುತ್ತಿರುವ ಬಗ್ಗೆ ತಿಳಿಸಿಕೊಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಎಮ್ಎಸ್ ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಅವರು ಭಾರತದಾದ್ಯಂತ ಚಾಲಕರನ್ನು ಭಾರತ್ ಪ್ರೈವೇಟ್ ಮೋಟಾರ್ ಮಜ್ದೂರ್ ಸಂಘ ಎಂಬ ಬಿಎಂಎಸ್ ನ ಸಂಯೋಜಿತ ಯೂನಿಯನ್ ಚಾಲಕರ ಸಂಘಟನೆ ಮಾಡುವ ಕೆಲಸವನ್ನು ಮಾಡುತ್ತಿದ್ದು ಈ ಕುರಿತು ಈಗಾಗಲೇ ಕರ್ನಾಟಕ ರಾಜ್ಯದ 13 ಜಿಲ್ಲೆಗಳ ರಿಕ್ಷಾ ಚಾಲಕ ಪ್ರಮುಖರ ಬೈಠಕ್ ಮಂಗಳೂರಿನಲ್ಲಿ ನಡೆದಿರುತ್ತದೆ ಎಂದು ತಿಳಿಸಿದರು.

ರಿಕ್ಷಾ ಚಾಲಕರಿಗೋಸ್ಕರ ವಿವಿಧ ರೀತಿಯ ಪ್ರಯತ್ನಗಳನ್ನು ನಾವು ಮಾಡಬೇಕಿದೆ ಎಂದು ಅದರ ಯೋಜನೆ ಯನ್ನು ರಿಕ್ಷಾ ಚಾಲಕ ಪ್ರತಿನಿಧಿಗಳಿಗೆ ತಿಳಿಸಿದರು.

ಭಾರತೀಯ ಮಜ್ದೂರ್ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಅನಿಲ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.   ಬಿಎಮ್ಎಸ್ ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ್ ಕುಮಾರ್ ಮಣಿ ಹಳ್ಳ ಅವರು ಉಪಸ್ಥಿತರಿದ್ದರು ಬಿ ಎಂ ಎಸ್ ನ ಜಿಲ್ಲಾ ಜೊತೆ ಕಾರ್ಯದರ್ಶಿ ಸಾಂತಪ್ಪ ಕಲ್ಮಂಜ ಅವರು ಸ್ವಾಗತಿಸಿ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here